ಕರ್ನಾಟಕ

karnataka

ETV Bharat / state

ದಾವಣಗೆರೆ : ಮಾನವೀಯತೆ ಮೆರೆದ ಎನ್‌ ಎಸ್ ಚಂದ್ರಪ್ಪನವರಿಗೆ ಡಿಸಿಯಿಂದ ಸನ್ಮಾನ.. - ದಾವಣಗೆರೆ ಡಿಸಿ ಕಚೇರಿ

ಅಪಘಾತಕ್ಕೀಡಾದ ಹೆಣ್ಣುಮಗಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಉಪ ತಹಶೀಲ್ದಾರರನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು. ಬಳಿಕ ಮಾತನಾಡಿದ ಡಿಸಿ, ಚಂದ್ರಪ್ಪನವರು ಉತ್ತಮ ಕೆಲಸ ಮಾಡಿದ್ದಾರೆ.

DC honoured NS Chandrappa
DC honoured NS Chandrappa

By

Published : Jun 2, 2020, 9:10 PM IST

ದಾವಣಗೆರೆ: ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಒದ್ದಾಡುತ್ತಿದ್ದ 44 ವರ್ಷದ ಪ್ರೇಮಾ ಎಂಬ ಮಹಿಳೆಯನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಬಸವಾಪಟ್ಟಣ ನಾಡ ಕಚೇರಿಯ ಉಪ ತಹಶೀಲ್ದಾರ್ ಎನ್ ಎಸ್ ಚಂದ್ರಪ್ಪರನ್ನು ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಡಿಸಿ ಮಹಾಂತೇಶ್ ಬೀಳಗಿ ಸನ್ಮಾನಿಸಿದರು.

ಮೇ 30ರಂದು ತ್ಯಾವಣಗಿ ಬೆಸ್ಕಾಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಗಳೂರು ತಾಲೂಕಿನ ಹಳದಂಡೆ ಗ್ರಾಮದ ಪ್ರೇಮಾ ದಾವಣಗೆರೆಯಿಂದ ಬೈಕ್‌ನ ಹಿಂದಿನ ಸೀಟಿನಲ್ಲಿ ಕುಳಿತು ಬರುತ್ತಿರುವಾಗ, ಮತ್ತಿ ಸಮೀಪ ಆಕಸ್ಮಿಕವಾಗಿ ಅಡ್ಡ ಬಂದ ಎಮ್ಮೆಗೆ ಬೈಕ್ ಡಿಕ್ಕಿ ಹೊಡೆದಿತ್ತು. ಕೆಳಗೆ ಬಿದ್ದು ಒದ್ದಾಡುತ್ತಿದ್ದರು, ಹಲವರು ಅವರನ್ನು ನೋಡಿದರೂ ಕೂಡಾ ಸಹಾಯಕ್ಕೆ ಮುಂದಾಗಿಲ್ಲ.

ಬಳಿಕ ಅಲ್ಲೇ ಸಾಗುತ್ತಿದ್ದ ಬಸವಾಪಟ್ಟಣ ನಾಡಕಚೇರಿಯ ಉಪ ತಹಶೀಲ್ದಾರ್ ಚಂದ್ರಪ್ಪ ಗಮನಿಸಿ, ಆಕೆಯನ್ನು ತಮ್ಮ ಕಾರಿನಲ್ಲಿ ಜಿಲ್ಲೆಯ ಎಸ್‍ಎಸ್ ಆಸ್ಪತ್ರೆಗೆ ತಂದು ಸೇರಿಸಿ, ಆಸ್ಪತ್ರೆ ಖರ್ಚಿಗೆಂದು 10 ಸಾವಿರ ರೂ. ನೀಡಿದ್ದರು. ನಂತರ ಪೋಷಕರಿಗೆ ವಿಷಯ ತಿಳಿಸಿದ್ದರು. ಇನ್ನೂ ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಅಪಘಾತಕ್ಕೀಡಾದ ಹೆಣ್ಣುಮಗಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಉಪ ತಹಶೀಲ್ದಾರರನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು. ಬಳಿಕ ಮಾತನಾಡಿದ ಡಿಸಿ, ಚಂದ್ರಪ್ಪನವರು ಉತ್ತಮ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ಹೀಗೆಯೇ ತಮ್ಮ ಸುತ್ತಮುತ್ತಲು ಏನಾದರೂ ಅವಘಡ ಸಂಭವಿಸಿದರೆ ಸಹಾಯಕ್ಕೆ ಮುಂದಾಗಿ ಮಾನವೀಯತೆ ಮೆರೆಯಬೇಕು ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಪಘಾತಕ್ಕೀಡಾದ ಮಹಿಳೆಯ ತಂದೆ ಪಂಚಾಕ್ಷರಪ್ಪನವರಿಗೆ ಧೈರ್ಯ ಹೇಳಿದರು. ಚಂದ್ರಪ್ಪ ಪತ್ನಿ ಬಿ ಎಸ್ ರೇಣುಕಮ್ಮ ಹಾಜರಿದ್ದರು.

ABOUT THE AUTHOR

...view details