ಕರ್ನಾಟಕ

karnataka

ETV Bharat / state

2 ಕುಟುಂಬಗಳಿಗೆ ಹರಡಿದ ಕೊರೊನಾ, ಐವರು ಮಕ್ಕಳಿಗೆ ಸೂಕ್ತ ಚಿಕಿತ್ಸೆ.. ಡಿಸಿ ಸ್ಪಷ್ಟನೆ

ಬಾಪೂಜಿ ಹಾಗೂ ಎಸ್ ಎಸ್ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಲಾಗಿದೆ. ಅಲ್ಲಿರುವ ಕೆಲ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುವುದು. ಇದಕ್ಕೆ ಸಕಾರಾತ್ಮಕವಾಗಿ ಆಸ್ಪತ್ರೆಯವರು ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದರು.

dc
dc

By

Published : May 9, 2020, 10:49 AM IST

ದಾವಣಗೆರೆ : ಕೊರೊನಾ‌ ಪಾಸಿಟಿವ್ ಬಂದ 14 ಪ್ರಕರಣ ಜಾಲಿನಗರ ಹಾಗೂ ಬಾಷಾನಗರದ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದವರು. ಈ ಪೈಕಿ ಐವರು ಮಕ್ಕಳಿಗೆ ಸೋಂಕು ತಗುಲಿದ್ದು, ತೀವ್ರ ನಿಗಾವಹಿಸಲಾಗಿದೆ. ಮಕ್ಕಳ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆತಂಕಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್‌ ಬೀಳಗಿ ಸ್ಪಷ್ಟನೆ ನೀಡಿದರು.

ಡಿಸಿ ಮಹಾಂತೇಶ್ ಆರ್ ಬೀಳಗಿ ಮಾಹಿತಿ..

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಾಲಿನಗರದ ಮೃತಪಟ್ಟ ಸೋಂಕಿತ ವೃದ್ಧ ಪಿ. 556 ಹಾಗೂ ಬಾಷಾನಗರದ ಪಿ.533 ಸಂಖ್ಯೆಯ ನರ್ಸ್ ಜೊತೆ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಬಂದಿದೆ. ವೃದ್ಧನ ಸೊಸೆಯ ಕುಟುಂಬದವರಿಗೆ ಸೋಂಕಿರುವುದು ದೃಢಪಟ್ಟಿದೆ. ನರ್ಸ್ ಸಂಪರ್ಕದಲ್ಲಿದ್ದ ಒಂದೇ ಕುಟುಂಬದ ಹತ್ತು ಮಂದಿಗೆ ಸೋಂಕು ತಗುಲಿದೆ ಎಂದು ತಿಳಿಸಿದರು.

ಬಾಪೂಜಿ ಹಾಗೂ ಎಸ್ ಎಸ್ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಲಾಗಿದೆ. ಅಲ್ಲಿರುವ ಕೆಲ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುವುದು. ಇದಕ್ಕೆ ಸಕಾರಾತ್ಮಕವಾಗಿ ಆಸ್ಪತ್ರೆಯವರು ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details