ಕರ್ನಾಟಕ

karnataka

ETV Bharat / state

ಎಲ್ಲೆಡೆ ಲೋಕಸಭಾ ಚುನಾವಣೆ ರಂಗು... ಇನ್ನೂ ಟಿಕೆಟ್​​​ ಗೊಂದಲದಲ್ಲಿ​ ದಾವಣಗೆರೆ ಕ್ಷೇತ್ರ

ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷ ಇನ್ನೂ ಟಿಕೆಟ್​ ಹಂಚಿಕೆಯ ಗೊಂದಲದಲ್ಲಿದ್ದು, ಈ ಕುರಿತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪಷ್ಟನೆ ನೀಡಿದ್ದಾರೆ.

ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್

By

Published : Mar 15, 2019, 8:07 PM IST

ದಾವಣಗೆರೆ: ಲೋಕಸಭೆ ಚುನಾವಣೆ ಎಲ್ಲೆಡೆ ರಂಗೇರಿದೆ. ಆದರೆ ದಾವಣಗೆರೆಯಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ತಯಾರಿ ಮಾಡಿಕೊಳ್ಳದೆ ಇನ್ನೂ ಕೂಡ ಟೆಕೆಟ್ ಗೊಂದಲದಲ್ಲೇ ಮುಳುಗಿದೆ.

ಹೌದು, ಸತತ ಮೂರು ಲೋಕಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಜಿಲ್ಲಾ ಕಾಂಗ್ರೆಸ್, ಈ ಬಾರಿಯಾದರು ಭಾರೀ ಪೈಪೋಟಿ ನೀಡುತ್ತೆ ಎಂಬ ಮಾಹಿತಿ ಇತ್ತು. ಆದರೆ ಇದುವರೆಗೂ ಕೂಡ ಅಭ್ಯರ್ಥಿ ಘೋಷಣೆ ಮಾಡದೇ ಚುನಾವಣಾ ಅಖಾಡಕ್ಕೆ ಇನ್ನೂ ಇಳಿದಿಲ್ಲ. ಈ ಬಾರಿಯೂ ಕೂಡ ಶಾಮನೂರು ಮನೆತನಕ್ಕೆ ಟಿಕೆಟ್ ಎಂದು ಈಗಾಗಲೇ ಹೈಕಮಾಂಡ್​ ಘೋಷಣೆ ಮಾಡಿದೆ. ಆದರೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧೆಗೆ ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗಿದೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ನಾನು ಚುನಾವಣೆಗೆ ರೆಡಿ ಇದ್ದೇನೆ ಎಂದು ಮೊದಲ ಬಾರಿಗೆ ಹೇಳಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದೆ. ದಾವಣಗೆರೆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಕ್ಕಾ ಆಗಿಲ್ಲ. ನನ್ನ ಹೆಸರು ಮಾತ್ರ ಹೈಕಮಾಂಡ್​ಗೆ ಹೋಗಿದೆ. ಅವರು ಕೂಡ ನಮಗೆ ಉಸ್ತುವಾರಿ ಕೊಟ್ಟಿದ್ದಾರೆ. ಕಾರ್ಯಕರ್ತರು ಕೂಡ ನಾನೇ ಆಭ್ಯರ್ಥಿ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ನಾನಿನ್ನು ಅಂತಿಮ‌ ತೀರ್ಮಾನ ಕೈಗೊಂಡಿಲ್ಲ ಎಂದರು.

ಮುಂದುವರೆದು ಮಾತನಾಡಿದ ಮಲ್ಲಿಕಾರ್ಜುನ್, ನನಗೆ ಸ್ಪರ್ಧಿಸಲು ಅಭ್ಯಂತರವಿಲ್ಲ. ಸದ್ಯ ಸೈಲೆಂಟಾಗಿದ್ದೇನೆ ಅಷ್ಟೆ. ಹೊರಗಿನಿಂದಲೂ ಆಕಾಂಕ್ಷಿಗಳಿದ್ದಾರೆ‌. ಎಚ್.ಎಂ.ರೇವಣ್ಣ ಅವರ ಜೊತೆಯಲ್ಲಿಯೂ ಮಾತನಾಡಿದ್ದೇನೆ. ಸೋಮವಾರ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದ್ದು, ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.


ABOUT THE AUTHOR

...view details