ಕರ್ನಾಟಕ

karnataka

ETV Bharat / state

ಬಿಜೆಪಿ ಮುಖಂಡನ ಕಾಮೆಂಟ್​ಗೆ ಕೆರಳಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ.. ಪರಸ್ಪರ ಅವಾಚ್ಯ ಪದಗಳಿಂದ ಕಿತ್ತಾಡಿಕೊಂಡ ನಾಯಕರು - ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್​ಬಿ ಮಂಜಪ್ಪ

ಫೇಸ್​ಬುಕ್ ಪೇಜ್​ನಲ್ಲಿ ಫೇಕ್ ಲೀಡರ್ಸ್ ಎಂಬ ಕಾಮೆಂಟ್​ಗೆ ಕೆರಳಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಬಿಜೆಪಿ ಮುಖಂಡ ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.

BJP and Congress leaders abused each other  Davanagere BJP and Congress leaders  leaders abused each other over comment issue  ಬಿಜೆಪಿ ಮುಖಂಡನ ಕಾಮೆಂಟ್​ಗೆ ಕೆರಳಿದ ಕಾಂಗ್ರೆಸ್  ಅವಾಚ್ಯ ಪದಗಳಿಂದ ಕಿತ್ತಾಡಿಕೊಂಡ ನಾಯಕರು  ಫೇಸ್​ಬುಕ್ ಪೇಜ್​ನಲ್ಲಿ ಫೇಕ್ ಲೀಡರ್ಸ್ ಎಂಬ ಕಾಮೆಂಟ್  ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್​ಬಿ ಮಂಜಪ್ಪ  ಹೊನ್ನಾಳಿ ಬಿಜೆಪಿ ಮುಖಂಡ ಸುದೀಪ್
ಬಿಜೆಪಿ ಮುಖಂಡನ ಕಾಮೆಂಟ್​ಗೆ ಕೆರಳಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ

By

Published : Aug 25, 2022, 11:39 AM IST

ದಾವಣಗೆರೆ:ಫೇಸ್​ಬುಕ್ ಪೇಜ್​ನಲ್ಲಿ ಫೇಕ್ ಲೀಡರ್ಸ್ ಎಂಬ ಕಾಮೆಂಟ್ ಮಾಡಿದ್ದಕ್ಕಾಗಿ ಬಿಜೆಪಿ ಮುಖಂಡನಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್​ಬಿ ಮಂಜಪ್ಪ ಹಾಗೂ ಹೊನ್ನಾಳಿ ಬಿಜೆಪಿ ಮುಖಂಡ ಸುದೀಪ್ ನಡುವೆ ವಾಕ್ಸಮರದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್ ಆಗ್ತಿದೆ.

ಕಾಂಗ್ರೆಸ್ ಕಾರ್ಯಕರ್ತ ಮಧು ಗೌಡ ಎಂಬ ಕೈ ಕಾರ್ಯಕರ್ತ ಜಿಲ್ಲಾಧ್ಯಕ್ಷ ಮಂಜಪ್ಪನವರ ವಿಡಿಯೋವನ್ನು ತನ್ನ ಫೇಸ್​ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್​ಗೆ ಬಿಜೆಪಿ ಮುಖಂಡ ಸುದೀಪ್‌ ಫೇಕ್ ಲೀಡರ್ಸ್ ಎಂದು ಕಾಮೆಂಟ್ ಮಾಡಿದ್ದಕ್ಕಾಗಿ ಇಷ್ಟೆಲ್ಲ ರಾಧಾಂತಕ್ಕೆ ಕಾರಣ ಆಗಿದೆ. ಇಬ್ಬರು ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದನೆ ಮಾಡಿಕೊಂಡಿದ್ದಾರೆ.

ಓದಿ:ಅರಣ್ಯಾಧಿಕಾರಿಗಳಿಗೆ ನಿಂದನೆ, ಬೆದರಿಕೆ ಆರೋಪ.. ಶಾಸಕ ಸುರೇಶ್ ​​ಗೌಡ ವಿರುದ್ಧ ಎಫ್​ಐಆರ್​

ABOUT THE AUTHOR

...view details