ದಾವಣಗೆರೆ: ಸಾಮಾನ್ಯವಾಗಿ ಜನರು ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದನ್ನು ನೋಡಿದ್ದೇವೆ. ಅದ್ರೆ, ಇಲ್ಲೋರ್ವ ಮಾಲೀಕ ಶಾಸಕರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ತನ್ನ ನೆಚ್ಚಿನ ಹೋರಿಯ ಹುಟ್ಟುಹಬ್ಬವನ್ನು ಆಚರಿಸಿರುವ ಅಪರೂಪದ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತಿಮ್ಮಿನಕಟ್ಟೆ ರಸ್ತೆಯ ಚಾಂದಿನಿ ಚೌಕ ( ಶ್ರೀ ದುರ್ಗಾಂಬಿಕಾ ದೇವಸ್ಥಾನ ) ಬಳಿ ನಡೆದಿದೆ.
ಭಸ್ಮಾಸುರ 146 ಎಂಬ ಹೋರಿಯ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಯಿತು. ಕಳೆದ 14 ವರ್ಷಗಳಿಂದ ಯಾರ ಕೈಗೂ ಸಿಗದ ಭಸ್ಮಾಸುರ 146 ಹೋರಿಯು ಮಾಲೀಕನಿಗೆ ಸಾಕಷ್ಟು ಬಹುಮಾನ ತಂದು ಕೊಟ್ಟಿದೆ. ಹೀಗಾಗಿ, ಹೋರಿ ಮಾಲೀಕ ಶಾಸಕ ರೇಣುಕಾಚಾರ್ಯ ಕೈಯಲ್ಲಿ ಕೇಕ್ ಕತ್ತರಿಸಿದರು. ಅಷ್ಟೇ ಅಲ್ಲದೆ, ಹೋರಿ ಜನ್ಮದಿನದ ಪ್ರಯುಕ್ತ ಫೋಟೋ ಶೂಟ್ ಕೂಡ ಮಾಡಿಸಿರುವುದು ವಿಶೇಷ.