ಕರ್ನಾಟಕ

karnataka

ETV Bharat / state

ಜರ್ಮನಿಯಲ್ಲಿ ದಾವಣಗೆರೆ ಮೂಲದ ಎಂಟೆಕ್ ವಿದ್ಯಾರ್ಥಿ ಸಾವು: ಕುಟುಂಬಸ್ಥರ ಆಕ್ರಂದನ - ಜರ್ಮನಿಯ ಚೆಮ್ನಿಟ್ಜ್ ತಂತ್ರಜ್ಞಾನ ವಿಶ್ವವಿದ್ಯಾಲಯ

ಜರ್ಮನಿಯಲ್ಲಿ ಎಂಟೆಕ್ ವಿದ್ಯಾಭ್ಯಾಸ ಮಾಡುತ್ತಿದ್ದ ದಾವಣಗೆರೆ ಮೂಲದ ವಿದ್ಯಾರ್ಥಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡು ಮೃತಪಟ್ಟ ಘಟನೆ ನಡೆದಿದೆ. ಯುವಕನ ಮೃತದೇಹ ತವರಿಗೆ ರವಾನೆಯಾಗಿದೆ.

davanagere-based-student-dies-in-germany
ಜರ್ಮಿನಿಯಲ್ಲಿ ದಾವಣಗೆರೆ ಮೂಲದ ಎಂಟೆಕ್ ವಿದ್ಯಾರ್ಥಿ ಸಾವು: ಕುಟುಂಬಸ್ಥರ ಆಕ್ರಂದನ

By

Published : Dec 15, 2022, 9:54 PM IST

ದಾವಣಗೆರೆ:ಮೊಬೈಲ್ ಸ್ಫೋಟಗೊಂಡು ಉಂಟಾದ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡು ಜರ್ಮನಿಯಲ್ಲಿ ದಾವಣಗೆರೆ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಇಲ್ಲಿನ ಸರಸ್ವತಿ ನಗರದ ನಿವಾಸಿಗಳಾದ ಶಿಕ್ಷಕ ದಂಪತಿ ರೇವಣಸಿದ್ದಪ್ಪ ಹಾಗೂ ಇಂದ್ರಿರಮ್ಮ ಅವರ ಪುತ್ರ ಸಂತೋಷ್ (30) ಸಾವನ್ನಪ್ಪಿದ ಯುವಕ.

ಮೃತ ಸಂತೋಷ್ ಜರ್ಮನಿಯ ಚೆಮ್ನಿಟ್ಜ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಎಂಟೆಕ್ ವಿದ್ಯಾಭ್ಯಾಸ ಮಾಡುತ್ತಿದ್ದ. ಕೆಲ ದಿನಗಳ ಹಿಂದಷ್ಟೇ ತೆರಳಿದ್ದ ಸಂತೋಷ್, ಕೇಮ್ನಿಟ್ಜ್ ನಗರದಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ.

ನವೆಂಬರ್ 30ರಂದು ತಡರಾತ್ರಿ ಯುವಕನಿದ್ದ ರೂಮಿನಲ್ಲಿ ಮೊಬೈಲ್ ಸ್ಫೋಟಗೊಂಡು ಶಾರ್ಟ್ ಸರ್ಕ್ಯೂಟ್ ಆಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಬೆಳಗ್ಗೆ ಸಮಯದಲ್ಲಿ ಅಪಾರ್ಟ್‌ಮೆಂಟ್‌ನ 6ನೇ ಮಹಡಿಯಲ್ಲಿ ದಟ್ಟ ಹೊಗೆ ಹಾಗೂ ಬೆಂಕಿ ಕಂಡುಬಂದಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅದಾಗಲೇ ಸಂತೋಷ್ ಸುಟ್ಟು ಕರಕಲಾಗಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಂತೋಷ್ ಸಾವಿನ ಬಗ್ಗೆ ಅಲ್ಲಿನ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸಂತೋಷ್ ಸಾವನ್ನಪ್ಪಿದ 16ನೇ ದಿನಕ್ಕೆ ಮೃತದೇಹ ತವರಿಗೆ ರವಾನೆಯಾಗಿದೆ. ನಾಳೆ ದಾವಣಗೆರೆಯ ಸ್ವಗ್ರಾಮ ಪುಣಬಘಟ್ಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ಬೆಂಗಳೂರು ಹಾಸ್ಟೆಲ್ ಶೌಚಾಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ABOUT THE AUTHOR

...view details