ಕರ್ನಾಟಕ

karnataka

ETV Bharat / state

ಅಮೆರಿಕದಲ್ಲಿ ದಾವಣಗೆರೆ ದಂಪತಿ ಸಾವು: ಮೃತದೇಹಗಳನ್ನು ಭಾರತಕ್ಕೆ ತರಲು ಪ್ರಯತ್ನ- ಜಿಲ್ಲಾಧಿಕಾರಿ - ಈಟಿವಿ ಭಾರತ್​ ಕನ್ನಡ ನ್ಯೂಸ್

ಅಮೆರಿಕದಿಂದ ಪ್ರತಿ 6 ಗಂಟೆಗೊಮ್ಮೆ ಮಾಹಿತಿ ತರೆಸಿಕೊಳ್ಳುತ್ತಿದ್ದೇವೆ. ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರಲು ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂವಿ
ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂವಿ

By

Published : Aug 21, 2023, 10:25 PM IST

ಅಮೆರಿಕದಲ್ಲಿ ದಾವಣಗೆರೆ ದಂಪತಿ ಸಾವು ಪ್ರಕರಣ

ದಾವಣಗೆರೆ : ಅಮೆರಿಕದಲ್ಲಿ ದಾವಣಗೆರೆ ಮೂಲದ ಪತಿ, ಪತ್ನಿ ಗಂಡು ಮಗು ಸಾವು ಪ್ರಕರಣ ವಿಚಾರವಾಗಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಪ್ರತಿಕ್ರಿಯಿಸಿದ್ದು, ನಿರಂತರವಾಗಿ ಅಲ್ಲಿಯ ಕಾನ್ಸುಲೇಟ್ ಜನರಲ್ ಮತ್ತು ಡೆಪ್ಯುಟಿ ಕಾನ್ಸುಲೇಟ್ ಜನರಲ್ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದೇವೆ. ಮೃತದೇಹಗಳನ್ನು ಭಾರತಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೆರಿಕದಲ್ಲಿರುವ ಕಾನ್ಸುಲೇಟ್ ಜನರಲ್ ಮಂಜುನಾಥ್, ಡೆಪ್ಯೂಟಿ ಕಾನ್ಸುಲೇಟ್ ಜನರಲ್ ವರುಣ್ ಜೋಸೆಫ್ ಸೇರಿ ಕೆಳಹಂತದ ಸಿಬ್ಬಂದಿಯೊಂದಿಗೆ ಸಂಪರ್ಕ ಮಾಡಿ ಮಾತುಕತೆ ನಡೆಸುತ್ತಿದ್ದೇವೆ. ಮೃತ ಯೋಗೇಶ್ ಮತ್ತು ಕುಟುಂಬಸ್ಥರ ಶವಪರೀಕ್ಷೆ ನಡೆಯಬೇಕಿದೆ. ಪ್ರಕರಣವನ್ನು ನ್ಯೂಯಾರ್ಕ್ ಪೊಲೀಸರು ಮತ್ತು ಅಲ್ಲಿನ ಸರ್ಕಾರ ತೀವ್ರ ತನಿಖೆಗೆ ಒಳಪಡಿಸಿದೆ.

ಏಷಿಯನ್ ಹಿಂದೂ ಫೆಡರಲ್ ಸರ್ವಿಸಸ್ ಐರ್ಲೆಂಡ್ ಪಾರ್ಕ್ ಮೂಲಕ ಮರಣೋತ್ತರ ಪರೀಕ್ಷೆಯಾದ ನಂತರ ಮೃತದೇಹಗಳನ್ನು ಹಿಂದೂ ಧರ್ಮದ ಪದ್ಧತಿಯಂತೆ ನಿರ್ವಹಣೆ ಮಾಡಲು ನೇಮಕ ಮಾಡಲಾಗಿದೆ. ಮೃತಪಟ್ಟ ಪ್ರತಿಭಾ ಹತ್ತಿರದ ಸಂಬಂಧಿ ಸೋಮಶೇಖರ್ ನೋಡಲ್ ಪರ್ಸನ್ ಆಗಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯೂಯಾರ್ಕ್ ಪೊಲೀಸರು ಅಧಿಕಾರಿಗಳೊಂದಿಗೆ ಕಾನ್ಸುಲರ್ ಜನರಲ್ ಜೊತೆ ಸೋಮಶೇಖರ್ ಸಂಪರ್ಕದಲ್ಲಿದ್ದಾರೆ.

ನಿನ್ನೆ ರಜೆ ಇದ್ದ ಕಾರಣ ಇಂದು ಶವಪರೀಕ್ಷೆ ನಡೆಯುತ್ತದೆ ಎಂಬ ಮಾಹಿತಿ ಇದೆ. ಶವ ಪರೀಕ್ಷೆಯ ಬಳಿಕ ಅಲ್ಲಿಯೇ ಹಿಂದು ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲುಬಹುದು. ಇಲ್ಲವೇ ಅವರ ಕುಟುಂಬದ ಅಪೇಕ್ಷೆಯಂತೆ ಮೃತದೇಹಗಳನ್ನು ಭಾರತಕ್ಕೆ ತರಿಸಬಹುದು. ಅದಕ್ಕಾಗಿ ಒಂದು ಪ್ರತ್ಯೇಕ ಏಜನ್ಸಿ ಸಹ ಗುರುತಿಸಲಾಗಿದ್ದು, ಕಾನ್ಸುಲೇಟ್ ಜನರಲ್ ಸಂಪೂರ್ಣ ಸಹಕಾರ ಇದೆ ಎಂದು ಮಾಹಿತಿ ನೀಡಿದ್ದಾರೆ. ಪ್ರತಿ 6 ಗಂಟೆಗೊಮ್ಮೆ ಅಲ್ಲಿಂದ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ. ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ಸ್ಪಂದಿಸುತ್ತಿದೆ. ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಅಲ್ಲಿಯ ಡೆಪ್ಯೂಟಿ ಕಾನ್ಸುಲೇಟ್ ಜನರಲ್​ ಅವರಿಂದ ಮಾಹಿತಿ ಬಂದಿದೆ ಎಂದು ತಿಳಿಸಿದರು.

ಆತ್ಮಶಾಂತಿಗಾಗಿ ಪ್ರಾರ್ಥನೆ:ಯೋಗೇಶ್, ಪತ್ನಿ ಪ್ರತಿಭಾ, ಮಗ ಯಶ್ ಈ ಮೂವರ ಸಾವಿನ ಹಿನ್ನೆಲೆಯಲ್ಲಿ ಅಮೆರಿಕದ ಬಾಲ್ಟಿಮೋರ್​ನಲ್ಲಿ ಸ್ಥಳೀಯರು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೃತರ ಮನೆ ಮುಂದೆ ಕ್ಯಾಂಡಲ್ ಹಿಡಿದು ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಯೋಗೇಶ್ ಆಪ್ತರು ಮತ್ತು ಸ್ಥಳೀಯರು ಸಾಕಷ್ಟು ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಬೆಂಗಳೂರಿನಲ್ಲಿ ಸಿಎಂ ಭೇಟಿಯಾದ ಕುಟುಂಬಸ್ಥರು :ಯೋಗೇಶ್ ಕುಟುಂಬ ಬೆಂಗಳೂರಿನಲ್ಲಿ ಸಿಎಂ ಭೇಟಿ ಮಾಡಿದೆ. ಮಗ, ಸೊಸೆ, ಮೊಮ್ಮಗನ ಪಾರ್ಥಿವ ಶರೀರವನ್ನು ತರಿಸಲು ವ್ಯವಸ್ಥೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಮುಂದೆ ಯೋಗೇಶ್ ತಾಯಿ ಶೋಭಾ ಮನವಿ ಮಾಡಿ ಕಣ್ಣೀರಿಟ್ಟರು. ಸಿಎಂ ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಿಎಂ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಈ ಹಿನ್ನೆಲೆಯಲ್ಲಿ ಸೂಚನೆ ನೀಡಿದರು.

ಇದನ್ನೂ ಓದಿ :ದಾವಣಗೆರೆ: ಅಮೆರಿಕಾದಲ್ಲಿ ಮೃತ ದಂಪತಿ ಮನೆಗೆ ಜಿಲ್ಲಾಧಿಕಾರಿ ಭೇಟಿ... ತಾಯ್ನಾಡಿಗೆ ಮೃತದೇಹ ತರಿಸುವಂತೆ ತಾಯಿಯ ಮನವಿ

ABOUT THE AUTHOR

...view details