ದಾವಣಗೆರೆ:ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆ ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿದ್ದು, ನಗರದಲ್ಲಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ. ಆದರೆ ಹೃದಯ ಭಾಗದಲ್ಲಿರುವ ಅಶೋಕ ರೈಲ್ವೆ ಗೇಟ್ಗೆ ಮಾತ್ರ ಸ್ಮಾರ್ಟ್ ಆಗುವ ಸೌಭಾಗ್ಯ ದೊರೆತಿಲ್ಲ.
ನಗರದ ಕೇಂದ್ರ ಬಿಂದು ಗಾಂಧಿ ವೃತ್ತದ, ಅಶೋಕ್ ರಸ್ತೆಯ ರೈಲ್ವೆ ಗೇಟ್ ಅಭಿವೃದ್ಧಿಯಾಗದೆ ಇರುವುದು ಜಿಲ್ಲೆ ಜನತೆಯ ದೌರ್ಭಾಗ್ಯವಾಗಿದೆ. ಈ ರೈಲ್ವೆ ಗೇಟ್ ತೆಗೆದು ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂಬ ಇಲ್ಲಿನ ಜನರ ನಾಲ್ಕು ದಶಕದ ಕನಸು ಕನಸಾಗಿಯೇ ಉಳಿದಿದೆ. ಹಳೇ ದಾವಣಗೆರೆ ಹಾಗೂ ಹೊಸ ದಾವಣಗೆರೆಗೆ ಸಂಪರ್ಕದ ಕೊಂಡಿಯಾಗಿ ಕಾರ್ಯನಿರ್ವಹಿಸುವ ಈ ರೈಲ್ವೆ ಗೇಟ್ನಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಸ್ಮಾರ್ಟ್ ಸಿಟಿ ಆದಾಗಿನಿಂದ ವಾಹನಗಳ ದಟ್ಟಣೆ ಹೆಚ್ಚಾಗಿ, ಗಂಟೆಗಟ್ಟಲೇ ಈ ರೈಲ್ವೆ ಗೇಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಆದ್ದರಿಂದ ಗಾಂಧಿ ವೃತ್ತದಿಂದ ಅಶೋಕ ಚಿತ್ರಮಂದಿರದ ತನಕ ಒಂದು ಮೇಲ್ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇಂದಿಗೂ ಈಡೇರಿಲ್ಲ. ಇಲ್ಲಿ ಮೇಲ್ಸೇತುವೆ ನಿರ್ಮಿಸಲು ಮಹಾನಗರ ಪಾಲಿಕೆಗೆ 3 ಕೋಟಿ ರೂ. ಅನುದಾನ ಬಂದಿದ್ದು ಉಪಯೋಗವಾಗಿಲ್ಲ. ಮೇಲ್ಸೇತುವೆ ನಿರ್ಮಿಸಿದರೆ ಅಲ್ಲಿರುವ ಸಾಕಷ್ಟು ಅಂಗಡಿ ಮಾಲೀಕರು ತಮ್ಮ ಆಸ್ತಿ ನೀಡಲು ಮುಂದಾಗಿದ್ದು, ಒಬ್ಬಿಬ್ಬರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಪರಿಹಾರ ನೀಡಿ ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎನ್ನುತ್ತಾರೆ ಸಂಸದ ಜಿ.ಎಂ. ಸಿದ್ದೇಶ್ವರ್.
ರೈಲ್ವೆ ಗೇಟ್ನಿಂದ ಆಗುವ ಸಮಸ್ಯೆ ಏನು?