ಕರ್ನಾಟಕ

karnataka

ETV Bharat / state

ಆಂಜನೇಯ ಸ್ವಾಮಿ ಕಾರ್ಣಿಕ ಸತ್ಯವಾಯ್ತಾ? ಈ ಕುರಿತ ವಿಡಿಯೋವೊಂದು ವೈರಲ್​​ - ಆಂಜನೇಯ ಸ್ವಾಮಿ ಕಾರ್ಣಿಕ

ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಆಂಜನೇಯ ಸ್ವಾಮಿಯ ಕಾರ್ಣಿಕವನ್ನು ಜನರು ತುಂಬ ನಂಬುತ್ತಾರೆ. ಇಲ್ಲಿ ಹೇಳಿದ ಕಾರ್ಣಿಕ ಸತ್ಯವಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.

davanagere-anjaneya-karnika
ಆಂಜನೇಯ ಸ್ವಾಮಿ ಕಾರ್ಣಿಕ ಸತ್ಯವಾಯ್ತಾ

By

Published : Apr 14, 2020, 7:47 PM IST

ದಾವಣಗೆರೆ: "ಭೂ ಲೋಕ ನಡುಗಿತಲೆ ಅಲ್ಲೋಲ ಕಲ್ಲೋಲ ವಾದಿತಲೇ'.‌. ಇದು ಹೊನ್ನಾಳಿ ತಾಲೂಕಿನ ಮಲೇ ಕುಂಬಳೂರು ಗ್ರಾಮದಲ್ಲಿ ಫೆಬ್ರವರಿ 19ರಂದು ನಡೆದಿದ್ದ ಆಂಜನೇಯ ಸ್ವಾಮಿಯ ಕಾರ್ಣಿಕದ ನುಡಿ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

ಆಂಜನೇಯ ಸ್ವಾಮಿ ಕಾರ್ಣಿಕ ಸತ್ಯವಾಯ್ತಾ?
ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಆಂಜನೇಯ ಸ್ವಾಮಿಯ ಕಾರ್ಣಿಕವನ್ನು ಜನರು ತುಂಬ ನಂಬುತ್ತಾರೆ. ಇಲ್ಲಿ ಹೇಳಿದ ಕಾರ್ಣಿಕ ಸತ್ಯವಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಆದರೆ, ಈಗ ಕಾಕತಾಳೀಯ ಎಂಬಂತೆ ಇಡೀ ವಿಶ್ವವೇ ಕೊರೊನಾ ವೈರಸ್ ‌ಸೋಂಕಿನಿಂದ ಕಂಗೆಟ್ಟು ಹೋಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಂಜನೇಯ ಸ್ವಾಮಿಯ ಕಾರ್ಣಿಕ ದೇಶಕ್ಕೆ ಮುನ್ನೆಚ್ಚರಿಕೆಯನ್ನು ನೀಡಿತ್ತು ಎಂದು ಹೇಳ ತೊಡಗಿದ್ದಾರೆ. ಆಂಜನೇಯಸ್ವಾಮಿಯ ಕಾರ್ಣಿಕ ನುಡಿ ಸತ್ಯವಾಗುತ್ತೆ ಎಂಬ ನಮ್ಮ ನಂಬಿಕೆ ನಿಜವಾಯ್ತು ಅಂತಾ ಜನ ಮಾತಾಡಿಕೊಳ್ಳತಿದ್ದಾರೆ.

ABOUT THE AUTHOR

...view details