ದಾವಣಗೆರೆ: ಜಿಲ್ಲೆಯಲ್ಲಿ 178 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 16,879ಕ್ಕೆ ಏರಿಕೆಯಾಗಿದೆ.
ದಾವಣಗೆರೆ: 178 ಕೊರೊನಾ ಪ್ರಕರಣಗಳು ದೃಢ : 108 ಮಂದಿ ಡಿಸ್ಚಾರ್ಜ್ - 178 Corona cases confirmed
ದಾವಣಗೆರೆ ಜಿಲ್ಲೆಯಲ್ಲಿ ಇಂದು 178 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು,108 ಜನರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1489 ಸಕ್ರಿಯ ಪ್ರಕರಣಗಳಿವೆ.
![ದಾವಣಗೆರೆ: 178 ಕೊರೊನಾ ಪ್ರಕರಣಗಳು ದೃಢ : 108 ಮಂದಿ ಡಿಸ್ಚಾರ್ಜ್ ದಾವಣಗೆರೆ](https://etvbharatimages.akamaized.net/etvbharat/prod-images/768-512-9062962-217-9062962-1601914289246.jpg)
ದಾವಣಗೆರೆ
ದಾವಣಗೆರೆ 103, ಹರಿಹರ 31, ಜಗಳೂರು 9, ಚನ್ನಗಿರಿ 14, ಹೊನ್ನಾಳಿ 20 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಒಬ್ಬರಲ್ಲಿ ಸೋಂಕು ಇರುವುದು ಖಚಿತವಾಗಿದೆ. 108 ಜನರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಒಟ್ಟು 15,147 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಪ್ರಸ್ತುತ 1489 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ. ಇಂದು 711 ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, 6348 ಪ್ರಕರಣಗಳ ವರದಿಗೆ ಜಿಲ್ಲಾಡಳಿತ ಕಾಯುತ್ತಿದೆ.