ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಮಂಗಳವಾರ 12 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 44ಕ್ಕೆ ಏರಿದೆ. ಜೊತೆಗೆ ಮತ್ತೊಬ್ಬರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊರೊನಾಗೆ ಮೂವರು ಬಲಿಯಾಗಿದ್ದಾರೆ.
ಕೇವಲ ಐದು ದಿನಗಳ ಹಿಂದೆ ಎರಡು ಪ್ರಕರಣ ಮಾತ್ರ ಇದ್ದವು. ನಂತರ 556 ಹಾಗೂ 533 ಸೋಂಕಿತರಿಂದ ಹಲವರಿಗೆ ಕೊರೊನಾ ಹರಡಿರುವುದು ದೃಢಪಟ್ಟಿದೆ. ರೋಗಿ-662 ಕೊರೊನಾ ಪೀಡಿತ 50 ವರ್ಷದ ಮಹಿಳೆ ಮೃತಪಟ್ಟಿದ್ದು, ನ್ಯುಮೋನಿಯಾ ಹಾಗೂ ಹೃದಯಾಘಾತದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮಹಿಳೆ ಮೃತಪಟ್ಟ ವೃದ್ಧ 556 ಸಂಖ್ಯೆಯ ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದಾಕೆ.