ದಾವಣಗೆರೆಯ ಮೂವರು ಗುಣಮುಖರಾಗಿ ಡಿಸ್ಚಾರ್ಜ್: ಜಿಲ್ಲಾಡಳಿತದಿಂದ ಪುಷ್ಪವೃಷ್ಟಿ - ದಾವಣಗೆರೆ ಲೇಟೆಸ್ಟ್ ಕೊರೊನಾ ಸುದ್ದಿ
ದಾವಣಗೆರೆಯ ಮೂವರು ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಇಂದು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿಕೊಡಲಾಗಿದೆ.
ಮೂವರು ಕೊರೊನಾ ಸೋಂಕಿತರು ಡಿಸ್ಚಾರ್ಜ್
ದಾವಣಗೆರೆ: ಕೊರೊನಾ ಸೋಂಕು ತಗುಲಿದ್ದ ಮೂವರು ಸಂಪೂರ್ಣ ಗುಣಮುಖರಾಗಿದ್ದು, ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮೂವರಿಗೂ ಜಿಲ್ಲಾಡಳಿತದ ವತಿಯಿಂದ ಪುಷ್ಪವೃಷ್ಟಿ ಸಲ್ಲಿಸಿ ಮನೆಗೆ ಕಳುಹಿಸಿಕೊಡಲಾಯಿತು.
ಈ ವೇಳೆ, ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಸರ್ಜನ್ ಸುಭಾಷ್ ಚಂದ್ರ, ಡಿಹೆಚ್ಒ ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್, ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಪುಷ್ಪವೃಷ್ಟಿ ಸಲ್ಲಿಸಿದರು.
P-533 ಸಂಖ್ಯೆಯ ಬಾಷಾನಗರದ ಸ್ಟಾಫ್ ನರ್ಸ್ ನ 17 ವರ್ಷದ ಪುತ್ರ, ಇದೇ ಏರಿಯಾದ 616 ಹಾಗೂ 635 ಸಂಖ್ಯೆಯ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದರು. ಈ ವೇಳೆ, ಮಾತನಾಡಿದ ಡಿಸಿ ಮಹಾಂತೇಶ್ ಬೀಳಗಿ ಸಂಜೆಯ ವೇಳೆಗೆ 17 ಮಂದಿ ಗುಣಮುಖರಾಗಲಿದ್ದು, ಡಿಸ್ಚಾರ್ಜ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಾಲಿಕೆ ಮೇಯರ್ ಅಜಯ್ ಕುಮಾರ್ ಮಾತನಾಡಿ, ಈಗಾಗಲೇ ಮೂವರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಸಂಜೆಯ ಹೊತ್ತಿಗೆ ಮತ್ತಷ್ಟು ಸೋಂಕಿತರು ಗುಣಮುಖರಾಗಿ ಹೊರ ಬರುತ್ತಿರುವುದು ಸಂತಸದ ವಿಷಯ. ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ನಿಂದ ಸಂಕಷ್ಟಕ್ಕೊಳಗಾಗಿದ್ದ ಜನರು, ವ್ಯಾಪಾರ ವಹಿವಾಟು ಆರಂಭ ಮಾಡಬಹುದು. ಕೊರೊನಾ ಜೊತೆ ಬದುಕಬೇಕಿರುವುದರಿಂದ ಸಾಮಾಜಿಕ ಅಂತರ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.