ಪಿಯುಸಿ ಟಾಪರ್ ಪೂಜಾ ಬಿ. ಪ್ರತಿಕ್ರಿಯೆ ದಾವಣಗೆರೆ:ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದುಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುವ ಉದ್ಯೋಗಿಯ ಮಗಳು ಪೂಜಾ ಬಿ ರಾಜ್ಯಕ್ಕೆ ಆರನೇ ರ‍್ಯಾಂಕ್ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 591 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ. ನಗರದ ಮಾಗನೂರು ಬಸಪ್ಪ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.
ಇದನ್ನೂ ಓದಿ: ಪಿಯುಸಿ ಫಲಿತಾಂಶ: ಹುಬ್ಬಳ್ಳಿ ವಿದ್ಯಾನಿಕೇತನ ಕಾಲೇಜಿನ ಸಾಯೀಶ್‌ಗೆ ವಿಜ್ಞಾನ ವಿಭಾಗದಲ್ಲಿ 3ನೇ ರ‍್ಯಾಂಕ್
ಇವರು ದಾವಣಗೆರೆ ನಗರದ ಅನೆಕೊಂಡದ ನಿವಾಸಿ ಬಸವರಾಜ್ ಎಂಬವರ ಪುತ್ರಿ. ನಿತ್ಯ ಆರು ಗಂಟೆ ಓದಿ ಗರಿಷ್ಠ ಅಂಕ ಗಳಿಸಿದ್ದೇನೆ ಎಂದಿರುವ ಪೂಜಾ ವೈದ್ಯೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಕನ್ನಡ- 97, ಇಂಗ್ಲಿಷ್- 96, ಭೌತಶಾಸ್ತ್ರ- 69, ರಸಾಯನಶಾಸ್ತ್ರ-70, ಗಣಿತ-100 ಅಂಕ ಪಡೆದಿರುವ ಪೂಜಾ ಅವರಿಗೆ ಪಾಲಕರು ಹಾಗೂ ಕಾಲೇಜು ಆಡಳಿತ ಮಂಡಳಿ ಸಿಹಿ ತಿನಿಸಿದರು.
ಇದನ್ನೂ ಓದಿ:ಬಡತನದಲ್ಲಿ ಅರಳಿದ ಪ್ರತಿಭೆ: ಕಲಾ ವಿಭಾಗದಲ್ಲಿ ರಾಹುಲ್ ರಾಠೋಡ್ ವಿಜಯಪುರ ಜಿಲ್ಲೆಗೆ ಟಾಪರ್..
ವಿದ್ಯಾರ್ಥಿನಿ ಪೂಜಾ ಮಾತನಾಡಿ, ''ಈ ಫಲಿತಾಂಶ ನಿರೀಕ್ಷೆ ಮಾಡರಲಿಲ್ಲ. ಆದ್ರೂ ಟಾಪರ್ ಬಂದಿದ್ದೇನೆ. ನನ್ನ ವಿದ್ಯಾಭ್ಯಾಸಕ್ಕೆ ಪೋಷಕರು ಹಾಗೂ ಕಾಲೇಜಿನ ಸಿಬ್ಬಂದಿಯ ಸ್ಪಂದನೆ ಚೆನ್ನಾಗಿತ್ತು. ಎಸ್ಎಸ್ಎಲ್ಸಿಯಲ್ಲಿ ಕೂಡಾ ಒಳ್ಳೆಯ ಅಂಕ ಪಡೆದಿದ್ದೆ. ಮಾಗನೂರು ಬಸಪ್ಪ ಕಾಲೇಜಿನ ಸಿಬ್ಬಂದಿ ಸಹಕಾರದಿಂದ ಒಳ್ಳೆಯ ಅಂಕ ಗಳಿಸಲಾು ಸಾಧ್ಯವಾಗಿದೆ. ವೈದ್ಯಳಾಗುವ ಕನಸಿದೆ" ಎಂದು ಹೇಳಿದರು.
ಇದನ್ನೂ ಓದಿ:2nd PUC ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಒಮ್ಮೆ ಯೋಚಿಸಿ: ಈ ಬಾರಿ 1 ಮಾರ್ಕ್ಸ್ ವ್ಯತ್ಯಾಸವಾದರೂ ಅಂಕಪಟ್ಟಿಗೆ ಸೇರ್ಪಡೆ
ತಂದೆ ಬಸವರಾಜ್ ಮಾತನಾಡಿ, ಕಾಲೇಜಿನ ಸಿಬ್ಬಂದಿ ಹಾಗೂ ಶಿಕ್ಷಕರು ಸಹಕಾರದಿಂದ ಪೂಜಾ ಉತ್ತಮ ಅಂಕಗಳನ್ನು ಪಡೆದಿದ್ದಾಳೆ. ಮಗಳ ಆಸೆಯಂತೆ ಡಾಕ್ಟರ್ ಓದಿಸುತ್ತೇವೆ ಎಂದರು. "ನಾನು ಪೆಟ್ರೋಲ್ ಬಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದು, ಪುತ್ರಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದರಿಂದ ಸಾಧನೆ ಮಾಡಿದ್ದಾಳೆ" ಎಂದು ಸಂತಸ ವ್ಯಕ್ತಿಪಡಿಸಿದರು.
ಇದನ್ನೂ ಓದಿ:ದ್ವಿತೀಯ ಪಿಯು ಫಲಿತಾಂಶ: ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ, ಜಿಲ್ಲೆಯಲ್ಲಿ 9 ವಿದ್ಯಾರ್ಥಿಗಳು ಟಾಪರ್
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರೇ ಟಾಪರ್ಸ್!