ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ದಸರಾ ಧರ್ಮ ಸಮ್ಮೇಳನ: ಸರ್ವಧರ್ಮೀಯರೂ ಪಾಲ್ಗೊಳ್ಳುವಂತೆ ಶಾಮನೂರು ಮನವಿ - ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

1986ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ದಸರಾ ಧರ್ಮ ಸಮ್ಮೇಳನ ನಡೆದಿದ್ದು, 32 ವರ್ಷಗಳ ನಂತರ ಮತ್ತೊಮ್ಮೆ ರಂಭಾಪುರಿ ಶ್ರೀಗಳ ದಸರಾ ಧಾರ್ಮಿಕ ಸಮ್ಮೇಳನ ನಡೆಯಲಿದೆ, . ಹೀಗಾಗಿ ಸರ್ವಧರ್ಮೀಯರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ದಸರಾ ಧರ್ಮ ಸಮ್ಮೇಳನ; ಸರ್ವಧರ್ಮಿಯರು ಪಾಲ್ಗೊಳ್ಳುವಂತೆ ಶಾಮನೂರು ಶಿವಶಂಕರಪ್ಪ ಮನವಿ

By

Published : Sep 15, 2019, 5:14 PM IST

ದಾವಣಗೆರೆ;1986ರಲ್ಲಿ ಜಿಲ್ಲೆಯಲ್ಲಿ ದಸರಾ ಧರ್ಮ ಸಮ್ಮೇಳನ ನಡೆದಿದ್ದು, 32 ವರ್ಷಗಳ ನಂತರ ಮತ್ತೊಮ್ಮೆ ರಂಭಾಪುರಿ ಶ್ರೀಗಳ ದಸರಾ ಧಾರ್ಮಿಕ ಸಮ್ಮೇಳನ ನಡೆಯಲಿದೆ. ಹೀಗಾಗಿ ಸರ್ವಧರ್ಮೀಯರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ದಸರಾ ಧರ್ಮ ಸಮ್ಮೇಳನ: ಸರ್ವಧರ್ಮೀಯರೂ ಪಾಲ್ಗೊಳ್ಳುವಂತೆ ಶಾಮನೂರು ಶಿವಶಂಕರಪ್ಪ ಮನವಿ

ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಧರ್ಮ ಸಮ್ಮೇಳನಕ್ಕೆ ವೇದಿಕೆ ನಿರ್ಮಾಣಕ್ಕಾಗಿ ಇಂದು ಹಂದರಗಂಬ ಪೂಜೆ ನೆರವೇರಿಸಲಾಯಿತು. ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಹಂದರಗಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ವೇದಿಕೆ ನಿರ್ಮಾಣಕ್ಕೆ ಚಾಲನೆ ನೀಡಿದರು.

ಇದೇ ವೇಳೆ ವಿವಿಧ ಮಠಗಳ ಮಠಾಧೀಶರು, ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಂಭಾಪುರಿ ಶ್ರಿಗಳ ಪೀಠಾರೋಹಣದ ನಂತರ 28ನೇ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಕಾರ್ಯಕ್ರಮ ಇದಾಗಿದ್ದು, ರಂಭಾಪುರಿ ಶ್ರೀಗಳು ದಸರಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಈ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಡಿನ ಸ್ವಾಮೀಜಿಗಳು, ಸಾಹಿತಿಗಳು, ವಿದ್ವಾಂಸರು, ಸಮಾಜ ಚಿಂತಕರು, ಕಲಾವಿದರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ABOUT THE AUTHOR

...view details