ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚಿದಂತೆ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ನಗರದಲ್ಲಿ ಘಟನೆಯೊಂದು ನಡೆದಿದೆ. ಸಲಿಂಗ ಕಾಮದ ಗೀಳಿಗೆ ಬಿದ್ದು ಓರ್ವ ವ್ಯಕ್ತಿಯನ್ನು ಅಪ್ರಾಪ್ತರು ಕೊಂದಿದ್ದಾರೆ.
ಸಲಿಂಗ ಕಾಮದ ಗೀಳಿಗೆ ಬಿದ್ದು, ಓರ್ವ ವ್ಯಕ್ತಿಯನ್ನು ಕೊಂದ ಅಪ್ರಾಪ್ತರು ಏನಿದು ಘಟನೆ?
ನಾಲ್ವರು ಅಪ್ರಾಪ್ತರು ವಿಜಯ್ ಕುಮಾರ್ ಎಂಬ ಹಿರಿಯ ವ್ಯಕ್ತಿಯನ್ನು ಸಲಿಂಗ ಕಾಮಕ್ಕೆಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಳಿಕ ಮೊಬೈಲ್, ಪರ್ಸ್, ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.
ಇದಾದ ನಂತರ ಕಳೆದ ತಿಂಗಳು 25ರಂದು ವಿಜಯ್ ಕುಮಾರ್, ಖಾಲಿ ನಿವೇಶನ ನೋಡಲು ನಂದಿನಿ ಲೇಔಟ್ಗೆ ಹೋದಾಗ ಈ ಸಲಿಂಗ ಕಾಮದ ಗುಂಪು ಮತ್ತೆ ಆಗಮಿಸಿ ಹಣಕ್ಕೆ ಬೇಡಿಕೆ ಇಟ್ಟು ಬಳಿಕ ಹಲ್ಲೆ ಮಾಡಿದೆ. ಗಂಭೀರ ಗಾಯಗೊಂಡ ವಿಜಯ್ ಕುಮಾರ್ ಜೂ. 27ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆ ಹಿನ್ನೆಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ಎಲ್ಲಾ ವಿಷಯ ಬೆಳಕಿಗೆ ಬಂದಿದೆ. ಬಂಧಿಸಲಾಗಿರುವ ಆರೋಪಿಗಳೆಲ್ಲರೂ ಬಾಲಾಪರಾಧಿಗಳಾಗಿದ್ದು, ಅವರನ್ನು ಬಾಲ ನ್ಯಾಯ ಮಂಡಳಿಗೆ ಒಪ್ಪಿಸಲಾಗಿದೆ.
ಏನಿದು ಆ್ಯಪ್:
ಸಲಿಂಗ ಕಾಮ ಇತ್ತೀಚಿನ ದಿನಗಳಲ್ಲಿ ಯುವ ಸಮೂಹವನ್ನು ಹಾಳು ಮಾಡುತ್ತಿದೆ. ಇದರೊಂದಿಗೆ ಡೇಟಿಂಗ್ ಅಪ್ಲಿಕೇಷನ್ಗಳ ಹಾವಳಿ ಕೂಡ ಹೆಚ್ಚಾಗಿದೆ. ಇನ್ನೂ ಕೆಲವೊಂದು ಕಂಪನಿಗಳು ಒಂದು ಹೆಜ್ಜೆ ಮುಂದಿಟ್ಟು ಸಲಿಂಗ ಕಾಮದ ಬಗ್ಗೆ ಇರುವ ಆ್ಯಪ್ನ್ನು ಮಾರುಕಟ್ಟೆಗೆ ಬಿಟ್ಟಿವೆ. ಗೂಗಲ್ ಪ್ಲೇನಲ್ಲಿ ಬಿಟ್ಟಿರುವ ಗ್ರಿಂಡ್ ಗೇ ಎಂಬ ಆ್ಯಪ್ಅನ್ನು ದಾವಣಗೆರೆಯ ಒಂದಷ್ಟು ಯುವಕರು ಡೌನ್ಲೋಡ್ ಮಾಡ್ಕೊಂಡು ಗ್ರೂಪ್ ಚಾಟ್ ಮಾಡ್ತಾ ಇದ್ದರು. ಗ್ರೂಪ್ನಲ್ಲೇ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು ಸಲಿಂಗ ಕಾಮದಲ್ಲಿ ಭಾಗಿಯಾಗುವ ದುಷ್ಚಟ ಬೆಳೆದಿದೆ.