ಕರ್ನಾಟಕ

karnataka

ETV Bharat / state

ಜಿಲ್ಲಾಸ್ಪತ್ರೆ ವಾಚ್​ಮನ್ ಮೇಲೆ ಹಲ್ಲೆ: ಕೆಲಸ ಸ್ಥಗಿತಗೊಳಿಸಿ ಡಿ ಗ್ರೂಪ್ ನೌಕರರ ಪ್ರತಿಭಟನೆ - ದಾವಣಗೆರೆ

ಚಿಗಟೇರಿ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ಗೆ ಭದ್ರತೆ ನೀಡಿದ್ದ ವಾಚ್​ಮನ್ ಸುರೇಶ್ ಎಂಬುವರ ಮೇಲೆ ಹಲ್ಲೆ ನಡೆದಿದೆ. ಕೋವಿಡ್-19 ವಾರ್ಡ್ ಕಡೆ ಹೋಗಬೇಡಿ ಎಂದು ಹೇಳಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಹೇಳಲಾಗ್ತಿದೆ.

D Group employeesProtest
ಡಿ ಗ್ರೂಪ್ ನೌಕರರಿಂದ ಪ್ರತಿಭಟನೆ..

By

Published : Aug 3, 2020, 3:16 PM IST

ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯ ವಾಚ್​ಮನ್ ಮೇಲಿನ ಹಲ್ಲೆ ಖಂಡಿಸಿ, ಡಿ ಗ್ರೂಪ್ ನೌಕರರು ಕೋವಿಡ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ವಾಚ್​ಮನ್ ಮೇಲೆ ಹಲ್ಲೆ: ಕೆಲಸ ಸ್ಥಗಿತಗೊಳಿಸಿ ಡಿ ಗ್ರೂಪ್ ನೌಕರರಿಂದ ಪ್ರತಿಭಟನೆ..

ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ಗೆ ಭದ್ರತೆ ನೀಡಿದ್ದ ವಾಚ್​ಮನ್ ಸುರೇಶ್ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಕೋವಿಡ್-19 ವಾರ್ಡ್ ಕಡೆ ಹೋಗಬೇಡಿ ಎಂದು ಹೇಳಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಹೇಳಲಾಗ್ತಿದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾವಲುಗಾರ ಸುರೇಶ್ ಮೇಲಿನ ಹಲ್ಲೆ ಖಂಡಿಸಿ ಕೋವಿಡ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಡಿ ಗ್ರೂಪ್ ನೌಕರರು ತಮಗೆ ಮಾಸ್ಕ್, ಗ್ಲೌಸ್ ಇಲ್ಲ. ಭದ್ರತೆಯೂ ಇಲ್ಲವೆಂದು ಸ್ಥಳಕ್ಕಾಗಮಿಸಿದ ಆರ್​ಎಮ್ ಓ ಜೊತೆ ವಾಗ್ವಾದ ನಡೆಸಿದರು.

ಹಗಲಿರುಳು ಕೊರೊನಾ ಸೋಂಕು ಹರಡುವ ಭೀತಿ ನಡುವೆಯೂ ಪ್ರಾಣ ಲೆಕ್ಕಿಸದೇ ಡಿ ಗ್ರೂಪ್ ನೌಕರರು ಕೆಲಸ ನಿರ್ವಹಿಸುತ್ತಿದ್ದೇವೆ. ನಮ್ಮ ಮೇಲೆಯೇ ಹಲ್ಲೆ ನಡೆದರೆ ಹೇಗೆ ಕೆಲಸ ನಿರ್ವಹಿಸಲು ಸಾಧ್ಯ. ತಮಗೆ ಸೂಕ್ತ ಭದ್ರತೆ ಒದಗಿಸಬೇಕು.‌ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ನೌಕರರು, ಕೆಲಸ ಸ್ಥಳಗಿತಗೊಳಿಸಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ಮುಂದುವರಿಸಿದ್ದಾರೆ.

ABOUT THE AUTHOR

...view details