ಕರ್ನಾಟಕ

karnataka

ETV Bharat / state

ಶೋಷಿತ ಸಮುದಾಯಕ್ಕೆ ದೇವರಾಜ್ ಅರಸು ನ್ಯಾಯ ಒದಗಿಸಿದ್ದಾರೆ: ಕೆ.ಬಿ ರಾಮಚಂದ್ರಪ್ಪ - ಹಿಂದುಳಿದ ವರ್ಗಗಳ ಸಮಾನ ಮನಸ್ಕ ವೇದಿಕೆ

ಹಿಂದುಳಿದ ವರ್ಗಗಳ ಸಮಾನ ಮನಸ್ಕ ವೇದಿಕೆ ಟ್ರಸ್ಟ್‌ ನಿಂದ ನಿನ್ನೆ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸು ಅವರ ಜನ್ಮ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹಿಂದುಳಿದ ವರ್ಗಗಳ ಸಮಾನ ಮನಸ್ಕ ವೇದಿಕೆ
ಹಿಂದುಳಿದ ವರ್ಗಗಳ ಸಮಾನ ಮನಸ್ಕ ವೇದಿಕೆ

By

Published : Aug 21, 2020, 12:12 PM IST

ಹರಿಹರ( ದಾವಣಗೆರೆ): ಹಿಂದುಳಿದ ಸಮುದಾಯಕ್ಕೆ ನ್ಯಾಯ ಒದಗಿಸಲು ಹಲವಾರು ಯೋಜನೆಗಳನ್ನು ರೂಪಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ್ ಅರಸು ಅವರಿಗೆ ಸಲುತ್ತದೆ ಎಂದು ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ ಹೇಳಿದರು.

ನಗರದ ಹೊಸಪೇಟೆ ಬೀದಿ ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಸಭಾಂಗಣದಲ್ಲಿ ಗುರುವಾರ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆ ಟ್ರಸ್ಟ್‌ನಿಂದ ಮಾಜಿ ಸಿಎಂ ದಿವಂಗತ ಡಿ. ದೇವರಾಜ್ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ್ ಅರಸು ಅವರು ಮೈಸೂರಿನ ಕಲ್ಲಹಳ್ಳಿ ಎಂಬ ಗ್ರಾಮದ ಸಾಮಾನ್ಯ ಬಡ ಅರಸು ಕುಟುಂಬದಲ್ಲಿ ಜನಿಸಿ, ಹಿಂದುಳಿದ ಸಮುದಾಯ ಸೇರಿದಂತೆ ಎಲ್ಲ ವರ್ಗದ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಎಂದರು.

ಹಿಂದುಳಿದ ವರ್ಗದ ಜನರಿಗಾಗಿ ಭೂ ಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ ಹಾಗೂ ಶೋಷಿತ ಸಮುದಾಯಕ್ಕೆ ರಾಜಕೀಯ ಆಸರೆ ಒದಗಿಸಿದರು ಎಂದರು.

ಈ ವೇಳೆ, ಕಾಂತಪ್ಪ ನಿಟ್ಟೂರು, ಹೆಚ್. ಕೆ .ಕೊಟ್ರಪ್ಪ, ವೈ.ಕೃಷ್ಣ ಮೂರ್ತಿ, ಚಂದ್ರಶೇಖರಪ್ಪ ಕೆ ಎನ್ ಹಳ್ಳಿ, ಮಹಂತೇಶ್ ಕೆಂಚನಹಳ್ಳಿ, ರಾಜಶೇಖರ್ ಕೆ.ಬಿ. ಬೀಮಪ್ಪ, ಎಂ. ಹೆಚ್. ಹನುಮಂತಪ್ಪ, ಪಿ. ಭದ್ರಾಚಾರಿ, ಹರೀಶ್, ಆಂಜನೇಯ, ಟೇಕೋಜಿರಾವ್, ಸುಭಾಷ್, ಕುಮಾರ್, ಅಣ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details