ಕರ್ನಾಟಕ

karnataka

ETV Bharat / state

ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ; ಗರ್ಭಿಣಿಯೆಂದು ತಿಳಿದು ಆರೋಪಿ ಎಸ್ಕೇಪ್‌ - ತಲೆಮರೆಸಿಕೊಂಡ ಆರೋಪಿ

ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ಹೇಳಿ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. 17 ವರ್ಷದ ಬಾಲಕಿ ಗರ್ಭಿಣಿಯಾಗಿದ್ದನ್ನು ತಿಳಿದು ತಲೆಮರೆಸಿಕೊಂಡಿದ್ದಾನೆ.

Rape case in Davangere
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ

By

Published : Jun 9, 2023, 7:59 PM IST

ದಾವಣಗೆರೆ:ಆರೋಪಿಯೊಬ್ಬ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಪರಾರಿಯಾಗಿರುವ ಘಟನೆ ದಾವಣಗೆರೆ ಮಹಿಳಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಯುವಕ ಬಾಲಕಿಯನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದಾನೆ. ಮದುವೆಯಾಗುವುದಾಗಿ ಹೇಳಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. 17 ವರ್ಷದ ಬಾಲಕಿ ಗರ್ಭಿಣಿಯಾಗಿದ್ದನ್ನು ತಿಳಿದು ತಲೆಮರೆಸಿಕೊಂಡಿದ್ದಾನೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಆರೋಪಿ ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿಯ ಆರೋಗ್ಯದಲ್ಲಿ ಏರುಪೇರಾದಾಗ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಆಗ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.‌ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಹೇಳಿದ್ದೇನು?:ಈ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದ ಮಹಿಳಾ ಪೋಲಿಸ್ ಠಾಣೆಯ ಸಿಪಿಐ ಮಲ್ಲಮ್ಮ ಚೋಬೆ, ''ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಗರ್ಭಿಣಿಯಾಗಿದ್ದಾಳೆ. ಇದರಿಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ತಂದೆ ಆಗಮಿಸಿ ದೂರು ನೀಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ. ಶೋಧ ಕಾರ್ಯ ಮುಂದುವರೆಸಿದ್ದೇವೆ" ಎಂದು ಈಟಿವಿ ಭಾರತಕ್ಕೆ ತಿಳಿಸಿದರು.‌

ಪ್ರೀತಿಸಿದ ಹುಡುಗಿಯ ಮೇಲೆ ಅತ್ಯಾಚಾರ:ಮೊಬೈಲ್ ಮರಳಿ ಕೊಡುವುದಾಗಿ ನಂಬಿಸಿ ಪ್ರೀತಿಸುತ್ತಿದ್ದ ಹುಡುಗಿಯನ್ನು ಬೆಂಗಳೂರು ನಗರಕ್ಕೆ‌ ಕರೆಸಿಕೊಂಡು ಅತ್ಯಾಚಾರ ಎಸಗಿರುವ ಘಟನೆ ಜೂನ್​ 7ರಂದು ನಡೆದಿತ್ತು. ಪ್ರಿಯತಮ ಸೇರಿದಂತೆ ಇಬ್ಬರು‌ ಆರೋಪಿಗಳನ್ನು ಗಿರಿನಗರ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತುಮಕೂರಿನ ಮೂಲದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಿಯಕರ ಪುರುಷೋತ್ತಮ್ ಮತ್ತು ಆತನ ಸ್ನೇಹಿತ ಚೇತನ್ ಎಂಬಾತನನ್ನು ಅರೆಸ್ಟ್​ ಮಾಡಿ, ನ್ಯಾಯಾಂಗ ಬಂಧನಕ್ಕೆ‌‌‌ ಒಪ್ಪಿಸಲಾಗಿದೆ. ತುಮಕೂರು ಮೂಲದ ಪುರುಷೋತ್ತಮ್, ರಾಪಿಡೋ ಕಂಪನಿಯಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದ. ಚೇತನ್ ಖಾಸಗಿ ಬ್ಯಾಂಕ್​ಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಇಬ್ಬರು ಪರಸ್ಪರ ಸ್ನೇಹಿತರು. ಗಿರಿನಗರದಲ್ಲಿ ನೆಲೆಸಿದ್ದರು.

ಕಳೆದ ಸೆಪ್ಟೆಂಬರ್​ನಲ್ಲಿ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಪುರುಷೋತ್ತಮ್ ಯುವತಿ ಹಿಂದೆ ಬಿದ್ದು ತನ್ನನ್ನು ಲವ್​ ಮಾಡುವಂತೆ ಪೀಡಿಸಿ ಪ್ರೇಮ‌ ನಿವೇದನೆ‌ ಮಾಡಿಕೊಂಡಿದ್ದ. ಅದಕ್ಕೆ ಯುವತಿ ಒಪ್ಪಿಕೊಂಡಿದ್ದಳು.‌ ಸಮಯ ಕಳೆದ ನಂತರ, ಇಬ್ಬರು ತಿರುಗಾಟ ನಡೆಸಿದ್ದಾರೆ.‌ ಕಳೆದ ವಾರ ತುಮಕೂರಿಗೆ ಬಂದಿದ್ದ ಪುರುಷೋತ್ತಮ್ ಯುವತಿಯನ್ನು ಭೇಟಿಯಾಗಿದ್ದನು. ಬೆಂಗಳೂರಿಗೆ ಬರುವ ವೇಳೆ ಆಕೆಯ ಮೊಬೈಲ್ ಪಡೆದುಕೊಂಡು‌‌ ಬಂದಿದ್ದ. ಯುವತಿ ಕೆಲವು ದಿನಗಳ ಹಿಂದೆ‌‌ ಕರೆ‌ ಮಾಡಿ ತನ್ನ‌ ಮೊಬೈಲ್ ಅನ್ನು ಮರಳಿ ಕೊಡುವಂತೆ ಕೇಳಿದ್ದಳು. ಬೆಂಗಳೂರಿಗೆ ಬಂದರೆ, ಮೊಬೈಲ್ ವಾಪಸ್​ ಕೊಡುವುದಾಗಿ‌ ಪುರುಷೋತ್ತಮ್ ಹೇಳಿದ್ದ.‌‌ ಜೂನ್ 7ರಂದು ನಗರಕ್ಕೆ ಯುವತಿ ಬಂದಿದ್ದಾಳೆ. ಆಕೆಯನ್ನು ಮೆಜೆಸ್ಟಿಕ್​ನಲ್ಲಿ ಕರೆದುಕೊಂಡು ತನ್ನ ಸಹಚರ ಚೇತನ್ ರೂಮಿಗೆ ಹೋಗಿದ್ದ. ಸ್ನೇಹಿತನನ್ನು ಹೊರ ಕಳುಹಿಸಿ, ಯುವತಿ ಮೈ ಮುಟ್ಟಲು ಯತ್ನಿಸಿದ್ದ.‌‌ ಯುವತಿ ತಿರಸ್ಕರಿಸಿದ್ದಳು, ಬಳಿಕ ಜ್ಯೂಸ್‌ನಲ್ಲಿ‌ ಮತ್ತು ಬರುವ ಔಷಧಿಯನ್ನು ಬೆರೆಸಿ ಯುವತಿಗೆ‌ ಕುಡಿಸಿದ್ದಾನೆ.‌ ಅರೆ ನಿದ್ರಾಹೀನ ಸ್ಥಿತಿಗೆ ತಲುಪಿದ ನಂತರ, ಬಲವಂತವಾಗಿ ರೂಮಿಗೆ ಕರೆದೊಯ್ದು ಅತ್ಯಚಾರ ಎಸಗಿದ್ದಾನೆ. ಘಟನೆಯ ನಂತರ ಸ್ಥಳೀಯರು ಯುವತಿಯ ನೆರವಿಗೆ ಬಂದಿದ್ದಾರೆ. ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.‌ ಪ್ರಕರಣ ದಾಖಲಿಸಿಕೊಂಡ ಗಿರಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:ಬೇರೆ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಕೋಪ; ಪ್ರಿಯಕರನ ಖಾಸಗಿ ಅಂಗ ಕತ್ತರಿಸಿದ ಪ್ರಿಯತಮೆ!

ABOUT THE AUTHOR

...view details