ದಾವಣಗೆರೆ :ನಗರದಲ್ಲಿ ವಂಚನೆ ಜಾಲ ಹೆಚ್ಚಾಗುತ್ತಿದ್ದು ಆಮಿಷಕ್ಕೊಳಗಾಗಿ ಅನೇಕರು ಮೋಸ ಹೋಗ್ತಿದ್ದಾರೆ. ದಾವಣಗೆರೆಯಲ್ಲಿ ನಡೆದಿರುವ ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಬ್ಬೊಬ್ಬರು ತಲಾ ನಾಲ್ಕೂವರೆ ಲಕ್ಷದಷ್ಟು ಹಣ ಕಳೆದುಕೊಂಡಿದ್ದಾರೆ.
ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವರಿಂದ 4.73 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ. ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ಶಶಿಕುಮಾರ್ ಮೋಸ ಹೋದ ವ್ಯಕ್ತಿ. ನೌಕರಿ ಕೊಡಿಸುವುದಾಗಿ ಅಪರಿಚಿತ ವ್ಯಕ್ತಿ ಶಶಿಕುಮಾರ್ ಅವರನ್ನು ನಂಬಿಸಿ ಲಕ್ಷಗಟ್ಟಲೇ ಹಣ ವಂಚನೆ ಮಾಡಿದ್ದಾನೆ. ಖಾಸಗಿ ಕಂಪನಿಯ ಹೆಸರು ಹೇಳಿಕೊಂಡು, ಅ ಕಂಪನಿಯ ನೌಕರನೆಂದು ಪರಿಚಿತನಾದ ಆರೋಪಿಯು ಶಶಿಕುಮಾರ್ ವಾಟ್ಸ್ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸಿ, ನೌಕರಿ ಕೊಡಿಸುವುದಾಗಿ ನಂಬಿಸಿ ಆಮಿಷವೊಡ್ಡಿದ್ದಾನೆ. ನಂತರ ಕಂಪನಿಯ ರಿಜಿಸ್ಟ್ರೇಷನ್ ಬುಕಿಂಗ್ ಮಾಡಬೇಕು, ಬಳಿಕ ನಿಮಗೆ ಹಣ ನೀಡಲಾಗುವುದು ಎಂದು ನಂಬಿಸಿದ್ದಾನೆ.
ಇದನ್ನು ನಂಬಿದ ಶರತ್ ಕುಮಾರ್, ಮೊದಲಿಗೆ ಸ್ವಲ್ಪ ಹಣ ಹಾಕಿದ್ದಾರೆ. ಬಳಿಕ ಹಂತ ಹಂತವಾಗಿ 43,854 ರೂಪಾಯಿ ಅನ್ನು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ನಂಬಿಕೆ ಬರುವಂತೆ ಅಪರಿಚಿತ ವ್ಯಕ್ತಿ ವಂಚನೆಗೊಳಗಾದ ಶರತ್ಗೆ 70,225 ಹಣವನ್ನು ಖಾತೆಗೆ ಹಾಕಿದ್ದಾನೆ. ನಂತರ ಮತ್ತೆ ಸುಮ್ಮನಿರದ ಆರೋಪಿಯು ರಿಜಿಸ್ಟ್ರೇಷನ್ಗಾಗಿ ಹಣದ ಅವಶ್ಯಕತೆ ಇದೆ ಎಂದು ವಿವಿಧ ಹಂತಗಳಲ್ಲಿ ಒಟ್ಟು 4.73 ಲಕ್ಷವನ್ನು ಹಣವನ್ನು ಹಾಕಿಸಿಕೊಂಡಿದ್ದಾನೆ. ಕೆಲಸ ಬೇಕಾದ್ರೆ ಮತ್ತೆ 11 ಲಕ್ಷ ರೂ. ಕಟ್ಟು ಎಂದಾಗ ವಂಚನೆಯ ಜಾಲ ಬಯಲಿಗೆ ಬಂದಿದೆ. ಇದನ್ನು ತಿಳಿದ ಶರತ್ ಕುಮಾರ್ ಅವರು ತಕ್ಷಣ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.