ದಾವಣಗೆರೆ:ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವಿಕಲಚೇತನರಿಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ನಡೆದಿದೆ.
ಚನ್ನಗಿರಿ ಪಟ್ಟಣದಿಂದ ನಲ್ಲೂರಿಗೆ ಕ್ರೇನ್ ತೆರಳುತ್ತಿದ್ದ ವೇಳೆ ಅದೇ ರಸ್ತೆ ಬದಿಯಲ್ಲಿ ವ್ಹೀಲ್ ಚೇರ್ನಲ್ಲಿ ಭಿಕ್ಷೆ ಬೇಡುತ್ತಿದ್ದ ವಿಕಲಚೇತನ ಮಹಿಳೆ ಮತ್ತು ಆಕೆಯ ಮಗುವಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸಲೀಂ(10), ರುಕ್ಸಾನ (40) ಎಂಬುವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.