ದಾವಣಗೆರೆ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ದನದ ಕೊಟ್ಟಿಗೆ ಕುಸಿದು ಕೊಟ್ಟಿಗೆಯಲ್ಲಿದ್ದ ಎರಡು ಹಸುಗಳ ಸಾವನ್ನಪ್ಪಿರುವ ಘಟನೆ ತಾಲೂಕಿನ ಮುದಹದಡಿ ಗ್ರಾಮದಲ್ಲಿ ನಡೆದಿದೆ.
ಮಳೆ ಅಬ್ಬರಕ್ಕೆ ದಾರುಣ ಅಂತ್ಯ ಕಂಡ ಹಸುಗಳು: ಮನಕಲುಕುವಂತಿದೆ ರೈತನ ಕಷ್ಟ - ದಾವಣಗೆರೆ ಜಿಲ್ಲಾ ಸುದ್ದಿ
ಮುದಹದಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಗಾಳಿಗೆ ದನದ ಕೊಟ್ಟಿಗೆ ಕುಸಿದು, ಮಣ್ಣು, ಇಟ್ಟಿಗೆ, ಹಂಚುಗಳು ಹಸುಗಳ ಮೇಲೆ ಬಿದ್ದ ಪರಿಣಾಮ ಎರಡು ಹಸುಗಳು ದಾರುಣವಾಗಿ ಸಾವನ್ನಪ್ಪಿವೆ.
ವರ್ಷಧಾರೆಗೆ ದಾರುಣ ಅಂತ್ಯ ಕಂಡ ಹಸುಗಳು
ವಿಜಯ್ ಕುಮಾರ್ ಸ್ವಾಮಿ ಎಂಬುವರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಗಾಳಿಯ ರಭಸಕ್ಕೆ ಕೊಟ್ಟಿಗೆ ಕುಸಿದಿದ್ದು, ಮಣ್ಣು, ಇಟ್ಟಿಗೆ, ಹಂಚು ಹಸುಗಳ ಮೇಲೆ ಬಿದ್ದಿವೆ. ಹೀಗಾಗಿ ಎರಡು ಹಸುಗಳು ಕಟ್ಟಿದ ಸ್ಥಳದಲ್ಲೇ ಮೃತಪಟ್ಟಿವೆ. ಇನ್ನು ಹಸುವನ್ನು ಹೊರತೆಗೆಯಲು ರೈತ ಕಷ್ಟ ಪಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಜೀವನ ಸಾಗಿಸಲಿಕ್ಕೆ ಇದ್ದ ಹಸುಗಳು ಕಣ್ಮುಂದೆಯೇ ಸಾವನ್ನಪ್ಪಿರುವುದನ್ನು ಕಂಡು ರೈತ ಕಣ್ಣೀರು ಹಾಕಿದ್ದಾನೆ.