ದಾವಣಗೆರೆ:ಕೋವಿಡ್ ನಿಯಮ ಉಲ್ಲಂಘಿಸಿ ಶಾಸಕ ರೇಣುಕಾಚಾರ್ಯ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮತ್ತು ಬಲಮುರಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿರುವ ಸುದ್ದಿಯನ್ನು ಈಟಿವಿ ಭಾರತ ಬಿತ್ತರಿಸಿತ್ತು. ಈ ವರದಿಯಿಂದ ಎಚ್ಚೆತ್ತ ಶಾಸಕರು ಕ್ಷಮೆ ಕೋರಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈ ಕಾರ್ಯಕ್ರಮ ಹಾಗೂ ಜಾತ್ರೆ ಮೊದಲೇ ನಿಗದಿಯಾಗಿತ್ತು. ಗ್ರಾಮಸ್ಥರಲ್ಲಿ ಕಾರ್ಯಕ್ರಮಕ್ಕೆ ಬರೋದಿಲ್ಲ ಎಂದು ಹೇಳಿದೆ. ಒಂದು ವೇಳೆ ಬಂದರೂ ನಾನು ಮಾಧ್ಯಮಮಿತ್ರರಿಗೆ ಆಹಾರವಾಗುತ್ತೇನೆ ಎಂದು ಹೇಳಿದ್ದೆ. ಆದ್ರೆ ಅವರು ನನ್ನ ಮಾತು ಕೇಳಲಿಲ್ಲ, ತುಂಬಾ ಒತ್ತಾಯ ಮಾಡಿದರು. ಹಾಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ ಎಂದರು
ಕೋವಿಡ್ ನಿಯಮ ಉಲ್ಲಂಘನೆ: ಕ್ಷಮೆ ಯಾಚಿಸಿದ ರೇಣುಕಾಚಾರ್ಯ ಇದನ್ನೂ ಓದಿ:ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರೇಣುಕಾಚಾರ್ಯ ಭಾಗಿ.. ಕೋವಿಡ್ ನಿಯಮ ಧೂಳಿಪಟ!
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ನಾನು ಟೀಕೆ ಮಾಡಿದ್ದೆ. ಈಗ ಅವರನ್ನು ಟೀಕೆ ಮಾಡಲು ನಾನು ನೈತಿಕ ಹಕ್ಕು ಕಳೆದುಕೊಂಡಿದ್ದೇನೆ. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ, ಬಲವಂತ ಮಾಡಿದ್ದಕ್ಕೆ ಹೋಗಬೇಕಾಯಿತು. ರಾಜ್ಯದ ಜನರ ಮುಂದೆ ನಾನು ಖಳನಾಯಕನಾಗಿದ್ದೇನೆ. ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ್ದೇನೆ ಕ್ಷಮಿಸಿ ಎಂದು ರೇಣುಕಾಚಾರ್ಯ ಕ್ಷಮೆ ಯಾಚಿಸಿದರು.
ಆಯೋಜಕರ ಮೇಲೆ ಪ್ರಕರಣ: ಎಸ್ಪಿ
ಬಲಮುರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸಿದವರ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ. ಹೋರಿ ಸ್ಪರ್ಧೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದಾರೆ, ಅದರ ವಿಡಿಯೋ ಕ್ಲಿಪಿಂಗ್ಸ್ ಸಂಗ್ರಹಿಸಿದ್ದು, ಆಯೋಜಕರ ಮೇಲೆ ಪ್ರಕರಣ ದಾಖಲಿಸುತ್ತೇವೆ. ಇನ್ನು ಎಂಪಿ ರೇಣುಕಾಚಾರ್ಯ ಮೇಲೆ ದೂರು ದಾಖಲು ಮಾಡಲು ಮುಂದಾಗಿದ್ದೇವೆ. ಕೂಡಲೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿದ್ದೇನೆ. ಕೋವಿಡ್ ನಿಯಮಾವಳಿ ಉಲ್ಲಂಘನೆಯಾಗಿದ್ದು, ಈಗ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೊನ್ನಾಳಿ ತಹಶೀಲ್ದಾರ್ ಬಸನಗೌಡ ಕೊಟ್ಟೂರು ದೂರವಾಣಿ ಮೂಲಕ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.