ಕರ್ನಾಟಕ

karnataka

ETV Bharat / state

ಬೆಣ್ಣೆನಗರಿಯಲ್ಲೂ ಕಟ್ಟುನಿಟ್ಟಿನ ನಿಯಮ ಜಾರಿ: ನಿಯಮ ಉಲ್ಲಂಘಿಸಿದವರಿಗೆ ದಂಡದ ಬಿಸಿ! - ದಾವಣಗೆರೆ ಕೋವಿಡ್​ ರೂಲ್ಸ್​​

ರಾಜ್ಯ ಸರ್ಕಾರದಿಂದ ಬಂದ ಮಾರ್ಗಸೂಚಿ ಬೆನ್ಣೆನಗರಿ ದಾವಣಗೆರೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಅಧಿಕಾರಿ ವರ್ಗ ಕ್ರಮ ತೆಗೆದುಕೊಂಡಿದೆ.

davanagere covid rules
ಬೆಣ್ಣೆನಗರಿಯಲ್ಲೂ ಕಟ್ಟುನಿಟ್ಟಿನ ನಿಯಮ ಜಾರಿ - ನಿಯಮ ಉಲ್ಲಂಘಿಸಿದವರಿಗೆ ದಂಡದ ಬಿಸಿ!

By

Published : Apr 23, 2021, 10:55 AM IST

ದಾವಣಗೆರೆ: ರಾಜ್ಯ ಸರ್ಕಾರದಿಂದ ಬಂದ ಮಾರ್ಗಸೂಚಿಯನ್ವಯ ಇಂದು ಅಧಿಕಾರಿಗಳು ದಾವಣಗೆರೆಯಲ್ಲಿ ಬಹುತೇಕ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಕೊರೊನಾ ನಿಯಮ ಪಾಲಿಸದಿರುವ ಖಾಸಗಿ ಬಸ್ ಹಾಗೂ ಆಟೋ ಚಾಲಕರಿಗೆ ದಂಡ‌ ಪ್ರಯೋಗ ಮಾಡಿ ಬಿಸಿ ಮುಟ್ಟಿಸಿದ್ರು.

ತಹಶೀಲ್ದಾರ್​ ಸಿಟಿ ರೌಂಡ್ಸ್​​

ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದರ ಬಗ್ಗೆ ಅಂಗಡಿ ಮಾಲೀಕರಿಗೆ ಅರಿವಿಲ್ಲದೆ ಅಂಗಡಿಗಳನ್ನು ತೆರೆದು ವ್ಯಾಪಾರಕ್ಕೆ ನಿಂತಿದ್ದರು. ಇದನ್ನು ಗಮನಿಸಿದ ತಹಶೀಲ್ದಾರ್ ಗಿರೀಶ್ ರಸ್ತೆಗಿಳಿದು ಬಟ್ಟೆಯ ಅಂಗಡಿ, ಬೆಳ್ಳಿ ಬಂಗಾದಂಗಡಿ, ಸ್ಟೀಲ್ ಮೆಟಲ್ ಅಂಗಡಿಗಳಿಗೆ ನುಗ್ಗಿ ಮಾಲೀಕರಿಗೆ ಚಳಿ ಬಿಡಿಸಿದ್ರು. ಇನ್ನು ಮಂಡಿಪೇಟಿಯಲ್ಲಿರುವ ಮಹೇದ್ರಕರ್ ಬಟ್ಟೆ ಅಂಗಡಿಯಲ್ಲಿ ಸಾವಿರ ಜನ ಇದ್ದಿದ್ದನ್ನು ಗಮನಿದ ತಹಶೀಲ್ದಾರ್ ದಾಳಿ ನಡೆಸಿ ರಾಜ್ಯ ಸರ್ಕಾರದ ಮಾರ್ಗಸೂಚಿ ಗೊತ್ತಿಲ್ವ ಎಂದು ಆಕ್ರೋಶ ವ್ಯಕ್ತಪಡಿಸಿ ಮಹೇಂದ್ರಕರ್ ಬಟ್ಟೆ ಅಂಗಡಿ ಮಾಲೀಕ ವಿಠಲ್ ಎಂಬುವರನ್ನು ವಶಕ್ಕೆ ಪಡೆದ್ರು. ಇನ್ನು ಬೆಳ್ಳಿ-ಬಂಗಾರದ ಅಂಗಡಿಗಳಲ್ಲಿ ಮುಂದೆ ಬೀಗ ಹಾಕಿ ಹಿಂದಿನ ಬಾಗಿಲಿನಿಂದ ವ್ಯವಹಾರ ಮಾಡುತ್ತಿದ್ದನ್ನು ಗಮನಿಸಿದ ತಹಶೀಲ್ದಾರ್ ಪ್ರಕರಣ ದಾಖಲಿಸುವಂತೆ ಎಚ್ಚರಿಕೆ ನೀಡಿದರು. ದಾವಣಗೆರೆಯ ಬೇತೂರು ರಸ್ತೆಯಲ್ಲಿ ಹೆಚ್ಚು ಜನರನ್ನು ಕೂರಿಸಿದ್ದರಿಂದ ಖಾಸಗಿ ಬಸ್ ಆಟೋಗಳಿಗೆ ದಂಡ ಪ್ರಯೋಗ ಮಾಡಿ ಕೊರೊನಾ ಜಾಗೃತಿ ಮೂಡಿಸಿದರು.

ಡಿಸಿ ಸಿಟಿ ರೌಂಡ್ಸ್

ನೈಟ್ ಕರ್ಫ್ಯೂ ಹಿನ್ನೆಲೆ ಡಿಸಿ ಮಹಾಂತೇಶ್ ಬೀಳಗಿ ಸಿಟಿ ರೌಂಡ್ಸ್ ಹಾಕಿ ಕರ್ಫ್ಯೂಗೆ ಸಹಕರಿಸುವಂತೆ ಮನವಿ ಮಾಡಿದರು. ಇನ್ನು ಹಳೇ ದಾವಣಗೆರೆಗೆ ಭೇಟಿ ನೀಡಿದ ಡಿಸಿ, ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿರುವ ದೃಶ್ಯಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಒಟ್ಟಾರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಕೊರೊನಾ ತಡೆಗಟ್ಟಲು ಅಧಿಕಾರಿ ವರ್ಗ ಹಗಲಿರುಳೆನ್ನದೆ ಶ್ರಮಿಸುತ್ತಿದೆ. ಅಂಗಡಿಗಳನ್ನು ಬಂದ್ ಮಾಡಿದ್ದು ಒಳ್ಳೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದ್ರೆ, ಇತ್ತ ಕೊರೊನಾ ಹೆಸರಿನಲ್ಲಿ ನಮ್ಮ ವ್ಯಾಪಾರಕ್ಕೆ ಪೆಟ್ಟು ಬೀಳಲಿದೆ ಎಂಬುದು ಜನಸಾಮಾನ್ಯರ ಮಾತು.

ಊಟ-ತಿಂಡಿ ಪಾರ್ಸಲ್​ಗೆ ಅನುವು:

ಹೋಟೆಲ್​ಗಳಲ್ಲಿ ಪಾರ್ಸಲ್ ವ್ಯವಸ್ಥೆಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಹೋಟೆಲ್ ಮಾಲೀಕರು ಗ್ರಾಹಕರಿಗೆ ಪಾರ್ಸಲ್ ನೀಡುವಂತಹ ವ್ಯವಸ್ಥೆಯನ್ನು ‌ಮಾಡುತ್ತಿದ್ದಾರೆ. ಪಾರ್ಸಲ್ ವ್ಯವಸ್ಥೆಯಿಂದ ನಮಗೆ ನಷ್ಟವಾಗುತ್ತಿದೆ. ಕುಳಿತು ತಿನ್ನುವ ಅವಕಾಶ ಮಾಡಿಕೊಟ್ಟಿದ್ದರೆ ನಮಗೆ ಅನುಕೂಲವಾಗುತ್ತಿತ್ತು. ಆದರೆ ಸರ್ಕಾರದ ಆದೇಶವನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಹಾಗಾಗಿ ಲಾಭವಾಗಲಿ, ನಷ್ಟವಾಗಲಿ ಪಾರ್ಸಲ್ ವ್ಯವಸ್ಥೆ ಮಾಡಿದ್ದೇವೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.

ಇದನ್ನೂ ಓದಿ:ಖಾಸಗಿ ಆಸ್ಪತ್ರೆಗಳಿಗೆ ಸಚಿವ ಶಿವರಾಮ್ ಹೆಬ್ಬಾರ್ ಖಡಕ್ ವಾರ್ನಿಂಗ್

ABOUT THE AUTHOR

...view details