ದಾವಣಗೆರೆ: ಗಣೇಶ ಹಬ್ಬಕ್ಕೆ ದಾವಣಗೆರೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಗಣೇಶ ಮೂರ್ತಿ ಕೂರಿಸುವ ಆಯೋಜಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್(COVID Negative Report) ಕಡ್ಡಾಯ ಮಾಡಿದ್ದು, ಜೊತೆಗೆ ಒಂದು ಡೋಸ್ ಲಸಿಕೆ ಪಡೆದ ಪ್ರಮಾಣಪತ್ರವಿದ್ದರೆ ಮಾತ್ರ ಗಣಪತಿ ಕೂರಿಸಲು ಅವಕಾಶ ಕಲ್ಪಿಸಲಾಗಿದೆ.
ದಾವಣಗೆರೆ ಜಿಲ್ಲಾಧಿಕಾರಿ ಆದೇಶ ಆಯೋಜಕರು, ಭಕ್ತರಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ಕಡ್ಡಾಯಗೊಳಿಸಲಾಗಿದೆ. ಡಿಜೆ, ಸಾಂಸ್ಕೃತಿಕ, ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆಯೋಜಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಆದೇಶ ಬಂದಿದ್ದರಿಂದ ದಾವಣಗೆರೆ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ದಾವಣಗೆರೆಯ ಪ್ರತಿ ವಾರ್ಡ್ಗೆ ಒಂದು ಗಣೇಶ ಕೂರಿಸಲು ಸರ್ಕಾರ ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಎರಡು ಅಥವಾ ಮೂರು ವಾರ್ಡ್ಗೆ ಒಂದು ಗಣೇಶ ಕೂರಿಸಲು ಸೂಚಿಸಿದ್ದೇವೆ ಎಂದು ಡಿಸಿ ತಿಳಿಸಿದರು.
ಪರಂಪರೆ ಉಳಿಸುವ ಸಲುವಾಗಿ ಹಾಗೂ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಜಾರಿಗೆ ತಂದಿದ್ದು, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದ್ರು.
ಇದನ್ನೂ ಓದಿ:ಗಣೇಶ ಹಬ್ಬಕ್ಕೆ KSRTC ಬಂಪರ್ ಆಫರ್: 1000 ಬಸ್ ರಸ್ತೆಗಿಳಿಸಿದ ಇಲಾಖೆ