ಕರ್ನಾಟಕ

karnataka

ETV Bharat / state

ಕೋವಿಡ್​ನ ಈ​ ಕರಾಳ ದಿನಗಳನ್ನೇ ಬಂಡವಾಳ ಮಾಡಿಕೊಂಡರಾ ಪಾಪಿಗಳು? - Bed blocking issue

ಎಲ್ಲೆಡೆ ಕೋವಿಡ್​​ ಅಬ್ಬರವಿದೆ. ಈ ಕೊರೊನಾ ಕಠಿಣ ದಿನಗಳಲ್ಲಿಯೂ ಬೆಡ್ ಬ್ಲಾಕಿಂಗ್​​ ದಂಧೆ, ರೆಮ್ಡೆಸಿವಿರ್​​ ಅಕ್ರಮ ಮಾರಾಟದಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಸರ್ಕಾರ, ಸಂಬಂಧಪಟ್ಟ ಇಲಾಖೆ ಕಾರ್ಯೋನ್ಮುಖವಾಗಿದೆ.

Covid crisis: has the pandemic turned into an opportunity in adversity for touts and middlemen?
ಕೋವಿಡ್​ನ ಈ​ ಕರಾಳ ದಿನ

By

Published : Jun 14, 2021, 7:30 PM IST

ದಿನೇ - ದಿನೆ ವಿವಿಧ ರೂಪ ಪಡೆಯುತ್ತಾ ಅವಾಂತರ ಸೃಷ್ಟಿಸುತ್ತಿರುವ ಕೊರೊನಾ ಕಾಳಸಂತೆಕೋರರಿಗೆ, ಮಧ್ಯವರ್ತಿಗಳಿಗೆ ರತ್ನಗಂಬಳಿ ಹಾಸಿದಂತಾಗಿದೆ. ಹೌದು, ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್​​ ದಂಧೆ, ರೆಮ್ಡೆಸಿವಿರ್​ ಅಕ್ರಮ ಮಾರಾಟ ಎಗ್ಗಿಲ್ಲದೇ ನಡೆಯುತ್ತಿರೋದು ಜಗಜ್ಜಾಹೀರಾಗಿದೆ. ಹಾಗಂತ ಸರ್ಕಾರ ಕೈ ಕಟ್ಟಿ ಕುಳಿತಿಲ್ಲ. ಇಂತಹ ದಂಧೆಗಳಿಗೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗ್ತಿದೆ.

ಕಳೆದ ಕೆಲ ದಿನಗಳ ಹಿಂದೆ ರಾಜ್ಯ ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ವಿಪರೀತವಾಗಿ ಹೆಚ್ಚಿತ್ತು. ಬೆಡ್​ಗೆ ಬೇಡಿಕೆ ಹೆಚ್ಚಾಗಿದ್ದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಬೆಡ್ ಬ್ಲಾಕಿಂಗ್​ ದಂಧೆ ನಡೆಸಿದ್ದು, ಜಗಜ್ಜಾಹೀರಾಗಿದೆ. ರೆಮ್ಡೆಸಿವಿರ್​ ಅಕ್ರಮ ಮಾರಾಟವೂ ಬೆಳಕಿಗೆ ಬಂತು. ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ಸರ್ಕಾರ ಈ ದಂಧೆಗೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ..

ಕೋವಿಡ್​ನ ಈ​ ಕರಾಳ ದಿನ

ದಾವಣಗೆರೆ ಜಿಲ್ಲೆಯ ಪ್ರತಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಬೆಡ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡೋ ಮೂಲಕ ಮಧ್ಯವರ್ತಿಗಳು ಹಸ್ತಕ್ಷೇಪ ಮಾಡದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ. ಕಾಳಸಂತೆಯಲ್ಲಿ ರೆಮ್ಡೆಸಿವಿರ್​​ ಅಕ್ರಮ ಮಾರಾಟಕ್ಕೆ ಪ್ರಯತ್ನಿಸಿದವರನ್ನೂ ಕೂಡ ಹೆಡೆ ಮುರಿಕಟ್ಟಲಾಗಿದೆ. ಪರಿಣಾಮ ಜಿಲ್ಲೇಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆದಿಲ್ಲ ಅನ್ನೋದೇ ಸಂತಸದ ವಿಚಾರ.

ಇದನ್ನೂ ಓದಿ: ಉಡುಪಿಯಲ್ಲೊಬ್ಬ ಮ್ಯಾಗ್ನೆಟಿಕ್ ಮ್ಯಾನ್: ದೇಹಕ್ಕೆ ಅಂಟಿಕೊಳ್ಳುತ್ತೆ ಲೋಹದ ವಸ್ತುಗಳು!

ಸಾವು-ನೋವಿನ ಈ ಕರಾಳ ದಿನಗಳಲ್ಲೂ ವಾಮ ಮಾರ್ಗದ ಮೂಲಕ ಹಣ ಮಾಡಲು ಹೊರಟಿರುವುದು ಮಾತ್ರ ದುರಂತ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿವೆ ಆದರೂ ಇಂತಹ ಅಕ್ರಮ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿಲ್ಲ ಅನ್ನೋದೆ ವಿಪರ್ಯಾಸ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಪೊಲೀಸ್​ ಇಲಾಖೆಯವರು ತಮ್ಮ ಕಾರ್ಯವನ್ನ ಮತ್ತಷ್ಟು ಚುರುಕುಗೊಳಿಸಬೇಕಿದೆ.

ABOUT THE AUTHOR

...view details