ದಾವಣಗೆರೆ:ಕೊರೊನಾ ಹಾಟ್ಸ್ಪಾಟ್ ಆಗಿದ್ದ ದಾವಣಗೆರೆಯಲ್ಲಿ ಈಗ ಮತ್ತೆ ಸೋಂಕು ಆಘಾತ ನೀಡುತ್ತಿದೆ.
ಕಳೆದ 24 ಗಂಟೆಗಳಲ್ಲಿ 25 ನರ್ಸಿಂಗ್ ವಿದ್ಯಾರ್ಥಿನಿಯರು ಸೇರಿ ಒಟ್ಟು 47 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಪಾಸಿಟಿವ್ ಬಂದಿರುವ ವಿದ್ಯಾರ್ಥಿನಿಯರೆಲ್ಲ ವಸತಿ ನಿಲಯಕ್ಕೆ ಸೇರಿದವರಾಗಿದ್ದಾರೆ.
ಸೋಂಕಿತರಿಗೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಾಸ್ಟೆಲ್ನಲ್ಲಿದ್ದ 134 ವಿದ್ಯಾರ್ಥಿನಿಯರು ಹಾಗು 15 ಜನ ಅಡಿಗೆಯವರ ಗಂಟಲು ದ್ರವ ಸಂಗ್ರಹಿಸಲಾಗಿದೆ. ಪರೀಕ್ಷಾ ವರದಿಗಾಗಿ ಸಿಬ್ಬಂದಿ ಎದುರು ನೋಡುತ್ತಿದ್ದಾರೆ.
ಪಾಸಿಟಿವ್ ಬಂದ 25 ವಿದ್ಯಾರ್ಥಿನಿಯರು ಒಂದೇ ಕಾಲೇಜಿನವರಾಗಿದ್ದಾರೆ. ಇವರಲ್ಲಿ ಕೆಲವರು ಹೊರ ರಾಜ್ಯದಿಂದ ಬಂದಿರುವ ವಿದ್ಯಾರ್ಥಿನಿಯರಿದ್ದಾರೆ. ವಿದ್ಯಾರ್ಥಿನಿಲಯ ಹಾಗು ಸುತ್ತಲಿನ ಪ್ರದೇಶವನ್ನು ಕಂಟೈನಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಇವರಲ್ಲಿ ರೂಪಾಂತರ ಹೊಂದಿರುವ ಕೊರೊನಾ ಸೋಂಕು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.