ಕರ್ನಾಟಕ

karnataka

ETV Bharat / state

ವೈಯಕ್ತಿಕ  ಕಾರಣಕ್ಕೆ ಅಕ್ಕನನ್ನೇ ಕೊಂದ ತಮ್ಮ... ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​ - undefined

ವೈಯಕ್ತಿಕ ಕಾರಣಗಳಿಂದ ಎರಡು ವರ್ಷಗಳ ಹಿಂದೆ ತನ್ನ ಅಕ್ಕನನ್ನೇ ಕೊಂದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿದೆ.

ಅಕ್ಕನನ್ನೇ ಕೊಂದ ತಮ್ಮ.. ಆರೋಪಿಗೆ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ

By

Published : May 26, 2019, 9:01 PM IST

ದಾವಣಗೆರೆ:ವೈಯಕ್ತಿಕ ಕಾರಣದಿಂದ ಅಕ್ಕನನ್ನು ಕೊಲೆ ಮಾಡಿದ ಆರೋಪಿ ತಮ್ಮನಿಗೆ ದಾವಣಗೆರೆ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ

ಗಣೇಶ್ ನಾಯ್ಕ್ ಶಿಕ್ಷೆಗೊಳಗಾದ ವ್ಯಕ್ತಿ. ಮಾಯಕೊಂಡ ಹೋಬಳಿಯ ಬೊಮ್ಮೆನಹಳ್ಳಿಯಲ್ಲಿ ಈ ಘಟನೆ ನಡೆದಿತ್ತು.

ಘಟನೆ ಹಿನ್ನೆಲೆ:

ವೈಯಕ್ತಿಕ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಈತ ತನ್ನ ಅಕ್ಕ ಶಾಂತಿ ಬಾಯಿ ಅವರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ, ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ವಾದ ಆಲಿಸಿದ ನ್ಯಾಯಾಲಯ ಅಕ್ಕನನ್ನು ಕೊಂದಿದ್ದು ಸಾಬೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

For All Latest Updates

TAGGED:

ABOUT THE AUTHOR

...view details