ದಾವಣಗೆರೆ:ನಮಗೆ ದೇಶ ಮುಖ್ಯ, ಜಾತಿ ಅಲ್ಲ. ನನ್ನ ಮಗ ಚಂದ್ರು ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದ, ಅವನ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸುತ್ತೇವೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿರುವ ತೋಟದಲ್ಲಿ ರೇಣುಕಾಚಾರ್ಯರವರ ತಂದೆ- ತಾಯಿ (ಚಂದ್ರುವಿನ ಅಜ್ಜ ಅಜ್ಜಿಯ) ಸಮಾಧಿ ಬಳಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಚಂದ್ರುವಿನ ಅಂತಿಮ ದರ್ಶನಕ್ಕೆ ಹೊನ್ನಾಳಿಯ ಹಿರೇಮಠದಲ್ಲಿರುವ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ.