ಕರ್ನಾಟಕ

karnataka

ETV Bharat / state

ದಾವಣಗೆರೆ: ಲಂಚ ಪಡೆಯುವಾಗ ಸಿಕ್ಕಿಬಿದ್ದ ಮಹಾನಗರ ಪಾಲಿಕೆ ವ್ಯವಸ್ಥಾಪಕ - ದಾವಣಗೆರೆ ಮಹಾನಗರ ಪಾಲಿಕೆ

ಭಾನುವಾರ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಕೃಷ್ಣಪ್ಪ ಎಂಬುವರಿಗೆ ಅಧಿಕಾರಿ ವೆಂಕಟೇಶ್ ಜಕಾತಿ ಟೆಂಡರ್ ಕೊಡಲು 7 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರಂತೆ.

Corporation Manager Venkatesh
ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್​

By

Published : Nov 7, 2022, 9:39 AM IST

ದಾವಣಗೆರೆ:ಹೈ ಕೋರ್ಟ್​ ಲೋಕಾಯುಕ್ತ ಸಂಸ್ಥೆಗೆ ಮರುಜೀವ ನೀಡಿದ ಬೆನ್ನಲ್ಲೇ ದಾಳಿಗಳು ಹೆಚ್ಚುತ್ತಿವೆ. ಭ್ರಷ್ಟರ ಎದೆಯಲ್ಲಿ ನಡುಕ‌ ಶುರುವಾಗಿದೆ. ದಾವಣಗೆರೆಯಲ್ಲೂ ಲೋಕಾಯುಕ್ತ ಕಾರ್ಯಾಚರಣೆ ನಡೆದಿದ್ದು, 3 ಲಕ್ಷ ರೂ ಲಂಚ ಪಡೆಯುವಾಗ ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಸಿಕ್ಕಿಹಾಕಿಕೊಂಡಿದ್ದಾರೆ.

ಭಾನುವಾರ ಮಹಾನಗರ ಪಾಲಿಕೆಯಲ್ಲಿ ಯಾರೂ ಇಲ್ಲದ ವೇಳೆ ಕೃಷ್ಣಪ್ಪ ಎಂಬುವರಿಗೆ ಅಧಿಕಾರಿ ವೆಂಕಟೇಶ್ ಜಕಾತಿ ಟೆಂಡರ್ ಕೊಡಲು ಏಳು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈಗಾಗಲೇ ಎರಡು ಲಕ್ಷ ರೂಪಾಯಿ ಮುಂಗಡ ಪಡೆದಿದ್ದ ಆರೋಪಿ​​, ಮಹಾನಗರ ಪಾಲಿಕೆ ಕಚೇರಿಯಲ್ಲಿ ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು.

ಇದನ್ನೂ ಓದಿ:ಲಂಚ ಆರೋಪದಡಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಮಂಜುನಾಥ್ ಮರುನೇಮಕ

ABOUT THE AUTHOR

...view details