ETV Bharat Karnataka

ಕರ್ನಾಟಕ

karnataka

ETV Bharat / state

ಮದುವೆಯಲ್ಲಿ ಕೊರೊನಾ ವಾರಿಯರ್ಸ್​ಗಳಿಗೆ ಸನ್ಮಾನ...! - ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ

ಮಗಳ ಮದುವೆಯನ್ನು ಕೊರೊನಾ ವಾರಿಯರ್ಸ್​ಗಳ ಸಮ್ಮುಖದಲ್ಲಿ, ಅವರಿಗೆ ಸನ್ಮಾನಿಸುವ ಮೂಲಕ ನೆರವೇರಿಸಿದ್ದು, ಸೋಮೇಶ್ ಅವರ ಕಾರ್ಯಕ್ಕೆ ಮನೆಯವರೂ ಹಾಗೂ ಅವರ ಸ್ನೇಹ ಬಳಗದವರು ಬೆಂಬಲ ಕೊಟ್ಟಿದ್ದಾರೆ. ಜನರೂ ಈ ಭಿನ್ನ ಮದುವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Corona Warriors honored in wedding
ಮದುವೆಯಲ್ಲಿ ಕೊರೊನಾ ವಾರಿಯರ್ಸ್​ಗಳಿಗೆ ಸನ್ಮಾನ
author img

By

Published : Nov 20, 2020, 10:09 PM IST

ದಾವಣಗೆರೆ: ವಿವಾಹ ಎಂದರೆ ಅದ್ಧೂರಿ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ಸಂಬಂಧಿಕರು, ನೆಂಟರು, ಸ್ನೇಹಿತರು, ಬಂಧು ಬಳಗದವರು ನೆರೆದಿರುತ್ತಾರೆ. ಆದ್ರೆ ನಗರದಲ್ಲಿ ಓರ್ವ ವ್ಯಕ್ತಿ ತನ್ನ ಪುತ್ರಿಯ ಮದುವೆ ವೇಳೆ ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಪುಷ್ಕಳ ಭೋಜನ, ಹೊಸ ಒಡವೆ, ವಸ್ತ್ರ ತೊಟ್ಟು, ಬಂಧು ಬಾಂಧವರೊಂದಿಗೆ ಸಂಭ್ರಮಿಸುವುಕ್ಕೆ ಮದುವೆ ಸೂಕ್ತ ವೇದಿಕೆಯೂ ಹೌದು. ಆದರೆ ಇಲ್ಲೊಬ್ಬರು ತಮ್ಮ ಮಗಳ ಮದುವೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ. ದಾವಣಗೆರೆ ಮೌನೇಶ್ವರಿ ಬಡಾವಣೆಯ ನಿವಾಸಿ ಶಿಲ್ಪಿ ಸೋಮೇಶ್ ಅವರು ತಮ್ಮ ಮಗಳಾದ ನಿಯತಿ (ಸಹನ) ಇವರ ವಿವಾಹವನ್ನು ವಿಭಿನ್ನ ರೀತಿಯಲ್ಲಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ‌.

ಕೊರೊನಾ ರೋಗದ ವಿರುದ್ಧ ಪ್ರತಿ ನಿತ್ಯವೂ ಹೋರಾಡುತ್ತಿರುವ, ಹೋರಾಡುತ್ತಲೇ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಣ, ಪೊಲೀಸ್, ವೈದ್ಯಕೀಯ, ಶ್ರಮಿಕ ವರ್ಗ ಹಾಗೂ ಪತ್ರಿಕಾ ವರ್ಗದ 25ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರನ್ನು ಮದುವೆ ವೇಳೆ ಶಿಲ್ಪಿ ಸೋಮೇಶ್ ದಂಪತಿ ಸನ್ಮಾನಿಸಿದರು.

ತಮ್ಮ ಮಗಳ ಮದುವೆಯನ್ನು ದಾವಣಗೆರೆ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆಸಿದ್ದು, ನೂತನ ವಧು-ವರರಿಗೆ ವಾರಿಯರ್ಸ್​ಗಳು ಶುಭ ಕೋರಿದ್ದಾರೆ. ತಮ್ಮ ಈ ವಿಭಿನ್ನ ಮದುವೆ ಕಾರ್ಯಕ್ರಮದ ಕುರಿತು ಮಾತನಾಡಿದ ಸೋಮೇಶ್ ಅವರು, ಕೊರೊನಾದಂತಹ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಶ್ರಮಿಸಿರುವ ಎಲ್ಲರನ್ನು ಸ್ಮರಿಸುವ ಪ್ರಯತ್ನ ಇದು. ಇದರೊಂದಿಗೆ ಸರಳ ವಿವಾಹದ ಮತ್ತೊಂದು ಮುಖದ ಪರಿಚಯ ಮಾಡುವ ಪ್ರಯತ್ನವೂ ಹೌದು ಎಂದು ಹೇಳಿದ್ದಾರೆ.

ABOUT THE AUTHOR

...view details