ಹರಿಹರ: ತಾಲೂಕಿನ ಕಡರನಾಯಕನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಗುಂಡೇರಿ ಕುಟುಂಬದವರಿಂದ ಕೊರೊನಾ ವಾರಿಯರ್ಸ್ಗಳ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
'ಕೊರೊನಾ ವಾರಿಯರ್ಸ್ ಶ್ರಮದ ಫಲವಾಗಿ ಈ ಗ್ರಾಮದಲ್ಲಿ ಕೊರೊನಾ ಸುಳಿದಿಲ್ಲ' - Corona Warriors felicitation ceremony
ಈ ಗ್ರಾಮದಲ್ಲಿ ಈವರೆಗೂ ಒಂದೂ ಪ್ರಕರಣ ವರದಿಯಾಗದಿರುವುದು ಗ್ರಾಮಸ್ಥರ ಹಾಗೂ ವಾರಿಯರ್ಸ್ಗಳ ಶ್ರಮದ ಫಲವಾಗಿದೆ ಎಂದು ಮಾಜಿ ಶಾಸಕ ಬಿ.ಪಿ.ಹರೀಶ್ ಪ್ರಶಂಸೆ ವ್ಯಕ್ತಪಡಿಸಿದರು.

ಕೊರೊನಾ ವಾರಿಯರ್ಸ್ಗಳ ಸನ್ಮಾನ ಸಮಾರಂಭ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಬಿ.ಪಿ.ಹರೀಶ್, ಈ ಗ್ರಾಮದಲ್ಲಿ ಈವರೆಗೂ ಒಂದೂ ಪ್ರಕರಣ ವರದಿಯಾಗದಿರುವುದು ಗ್ರಾಮಸ್ಥರ ಹಾಗೂ ವಾರಿಯರ್ಸ್ಗಳ ಶ್ರಮದ ಫಲವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬಲಿಜ ಸಮಾಜದ ತಾಲೂಕು ಉಪಾಧ್ಯಕ್ಷ ಚಂದ್ರಶೇಖರಪ್ಪ ಗುಂಡೇರಿ ಮಾತನಾಡಿ, ಸಂಬಳ ಸವಲತ್ತು ಇದ್ದರು ಕೂಡ ಜೀವದ ಹಂಗು ತೊರೆದು ವಾರಿಯರ್ಸ್ ಜನರನ್ನು ಕೊರೊನಾದಿಂದ ರಕ್ಷಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಅವರನ್ನು ಸತ್ಕರಿಸುವ ಮೂಲಕ ಅವರಲ್ಲಿ ಮತ್ತಷ್ಟು ಪ್ರೋತ್ಸಾಹ ತುಂಬುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.