ದಾವಣಗೆರೆಯಲ್ಲಿ 349 ಮಂದಿ ಗುಣಮುಖ: 272 ಜನರಿಗೆ ಸೋಂಕು - ಕೊರೊನಾ ಪಾಸಿಟಿವ್
ದಾವಣಗೆರೆ ಜಿಲ್ಲೆಯಲ್ಲಿ ಇಂದು ಹೊಸದಾಗಿ 272 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 349 ಸೋಂಕಿತರು ಚೇತರಿಕೆ ಕಂಡು ತೆರಳಿದ್ದಾರೆ.
ಕೊರೊನಾ ಪ್ರಕರಣ
ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 349 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಒಟ್ಟು 4,737 ಮಂದಿ ಡಿಸ್ಚಾರ್ಜ್ ಆದಂತಾಗಿದೆ.
ಇಂದು 272 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 6,779 ಕ್ಕೇರಿದೆ. 5 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಈವರೆಗೆ 153 ಮಂದಿ ಮೃತಪಟ್ಟಂತಾಗಿದೆ.ದಾವಣಗೆರೆಯಲ್ಲಿ 159, ಹರಿಹರ 35, ಜಗಳೂರು 4, ಚನ್ನಗಿರಿ 27, ಹೊನ್ನಾಳಿ 34, ಹೊರ ಜಿಲ್ಲೆಯಿಂದ ಬಂದಿದ್ದ 13 ಮಂದಿಯಲ್ಲಿ ಸೋಂಕಿರುವುದು ಖಚಿತವಾಗಿದೆ.
ದಾವಣಗೆರೆಯ ಜಾಲಿನಗರದ 49 ವರ್ಷದ ಮಹಿಳೆ, ಭಗತ್ ಸಿಂಗ್ ನಗರದ 63 ವರ್ಷದ ವೃದ್ಧೆ, ಪಿ. ಜೆ. ಬಡಾವಣೆಯ 78 ವರ್ಷದ ವೃದ್ಧೆ, ಆಂಜನೇಯ ಲೇಔಟ್ ನ 55 ವರ್ಷದ ಪುರುಷ ಹಾಗೂ ಹಾವೇರಿಯ ರಾಣೆಬೆನ್ನೂರಿನ 56 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.