ದಾವಣಗೆರೆ: ಕೊರೊನಾ ಸೋಂಕಿತ ಮೂವರ ಪ್ರಾಥಮಿಕ ವರದಿ ನೆಗೆಟಿವ್ ಬಂದಿದ್ದು, ಇದು ಇನ್ನಷ್ಟೇ ಖಚಿತವಾಗಬೇಕಿದೆ. ಈ ಮಾಹಿತಿಯನ್ನು ರಾಜ್ಯ ಮಟ್ಟದಲ್ಲಿಯೇ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್.ಬೀಳಗಿ ಹೇಳಿದ್ದಾರೆ.
ಸೋಂಕಿತ ಮೂರು ಪ್ರಕರಣಗಳು ಸದ್ಯಕ್ಕೆ ನೆಗೆಟಿವ್: ಜಿಲ್ಲಾಧಿಕಾರಿ
ಚಿತ್ರದುರ್ಗದ 1 ಹಾಗೂ ದಾವಣಗೆರೆಯ 2 ಪ್ರಕರಣಗಳು ಕೊರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಆದ್ರೆ ಈಗ ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಪಾಸಿಟಿವ್ ಆಗಿ ಇರುವ ಸೋಂಕಿತರಿಗೆ ವಿಲ್ ಪವರ್ ಜಾಸ್ತಿ ಇದೆ. ಗಂಟಲು ದ್ರವದ ಪ್ರಾಥಮಿಕ ವರದಿಯು ನೆಗೆಟಿವ್ ಬಂದಿದ್ದು, ಮತ್ತೊಂದು ಬಾರಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದರು.
ಚಿತ್ರದುರ್ಗದ ಒಂದು ಹಾಗೂ ದಾವಣಗೆರೆಯ ಎರಡು ಪ್ರಕರಣಗಳು ಕೊರೊನಾ ಪಾಸಿಟಿವ್ ಇತ್ತು. ಆದ್ರೆ, ಈಗ ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಪಾಸಿಟಿವ್ ಆಗಿ ಇರುವ ಸೋಂಕಿತರಿಗೆ ವಿಲ್ ಪವರ್ ಜಾಸ್ತಿ ಇದೆ. ಗಂಟಲು ದ್ರವದ ಪ್ರಾಥಮಿಕ ವರದಿಯು ನೆಗೆಟಿವ್ ಬಂದಿದ್ದು, ಮತ್ತೊಂದು ಬಾರಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ಲಾಕ್ ಡೌನ್ ಹಾಗೂ ಕೊರೊನಾ ಸೋಂಕು ತಡೆಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.
ಈಶ್ವರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.