ಕರ್ನಾಟಕ

karnataka

ETV Bharat / state

ಇಂದು ದಾವಣಗೆರೆಯಲ್ಲಿ‌ ಕೊರೊನಾಕ್ಕೆ ಮೂವರು ಬಲಿ - Davangere

ಕಳೆದ ಎರಡು ದಿನಗಳ ಹಿಂದೆ ಉಡುಪಿಯ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ 68 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ತಾಂತ್ರಿಕ ದೋಷದಿಂದ ದಾವಣಗೆರೆಗೆ ಸೇರಿಸಲಾಗಿತ್ತು..

Davangere
ದಾವಣಗೆರೆ

By

Published : Jul 26, 2020, 10:13 PM IST

Updated : Jul 26, 2020, 11:27 PM IST

ದಾವಣಗೆರೆ :ಜಿಲ್ಲೆಯಲ್ಲಿ‌ ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಮೃತರ ಸಂಖ್ಯೆ 36ಕ್ಕೇರಿದೆ. 89 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಒಟ್ಟು 1423 ಸೋಂಕಿತರಿದ್ದಾರೆ.

ನಗರದ ಆಜಾದ್‌ನಗರದ 21 ವರ್ಷದ ಯುವಕ, ಹರಿಹರ ತಾಲೂಕಿನ ಮಲೇಬೆನ್ನೂರಿನ 65 ವರ್ಷದ ವೃದ್ಧೆ ಜುಲೈ 23ರಂದು ಮೃತಪಟ್ಟಿದ್ರೆ, ನರಸರಾಜಪೇಟೆಯ 64 ವರ್ಷದ ವೃದ್ಧ ಜುಲೈ 24 ರಂದು ಸಾವನ್ನಪ್ಪಿದ್ದಾರೆ. ಈ ಮೂವರು ತೀವ್ರ ಉಸಿರಾಟ, ಕಫ ಹಾಗೂ ಜ್ವರದಿಂದ ಬಳಲುತ್ತಿದ್ದರು.

89 ಮಂದಿಗೆ ಕೊರೊನಾ ಪಾಸಿಟಿವ್..

ದಾವಣಗೆರೆಯಲ್ಲಿ 54, ಜಗಳೂರಿನಲ್ಲಿ 15, ಚನ್ನಗಿರಿ 10, ಹೊನ್ನಾಳಿ 4, ಹೊರ ಜಿಲ್ಲೆಯಿಂದ ಬಂದಿದ್ದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 57 ಮಂದಿ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ರೆ, 867 ಮಂದಿ ಈವರೆಗೆ ಮನೆಗೆ ತೆರಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಉಡುಪಿಯ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ 68 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ತಾಂತ್ರಿಕ ದೋಷದಿಂದ ದಾವಣಗೆರೆಗೆ ಸೇರಿಸಲಾಗಿತ್ತು. ಈ ಸಾವಿನ ಸಂಖ್ಯೆ ಉಡುಪಿಗೆ ಸೇರಿದ ಕಾರಣ ದಾವಣಗೆರೆಯಲ್ಲಿ ಈವರೆಗೆ ಒಟ್ಟು ಮೃತರ ಸಂಖ್ಯೆ 36ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್ ಬೀಳಗಿ ಮಾಹಿತಿ ನೀಡಿದ್ದಾರೆ.

Last Updated : Jul 26, 2020, 11:27 PM IST

ABOUT THE AUTHOR

...view details