ಕರ್ನಾಟಕ

karnataka

By

Published : Sep 3, 2020, 9:45 PM IST

ETV Bharat / state

ದಾವಣಗೆರೆಯಲ್ಲಿಂದು 222 ಮಂದಿಗೆ ಕೊರೊನಾ... ಮೂವರು ಸಾವು

ದಾವಣಗೆರೆ ಜಿಲ್ಲೆಯಲ್ಲಿಂದು 222 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 10,319ಕ್ಕೆ ಏರಿಕೆಯಾಗಿದೆ.

Corona Positive for 222 people in Davanagere district
ದಾವಣಗೆರೆಯಲ್ಲಿಂದು 222 ಮಂದಿಗೆ ಕೊರೊನಾ..ಮೂರು ಸಾವು

ದಾವಣಗೆರೆ: ಜಿಲ್ಲೆಯಲ್ಲಿಂದು ಕೊರೊನಾಕ್ಕೆ ಮೂವರು ಬಲಿಯಾಗಿದ್ದು, 222 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕೆಟಿಜೆ ನಗರದ 45 ವರ್ಷದ ಪುರುಷ, ಅಣಜಿ ಗ್ರಾಮದ 75 ವರ್ಷದ ವೃದ್ಧ ಹಾಗೂ ಹರಿಹರ ತಾಲೂಕಿನ ಕಡ್ಲೆಗೊಂದಿ ಗ್ರಾಮದ 70 ವರ್ಷದ ವೃದ್ಧೆ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 199ಕ್ಕೇರಿದೆ.

ದಾವಣಗೆರೆಯ 118, ಹರಿಹರ 38, ಜಗಳೂರು 10, ಚನ್ನಗಿರಿ 24, ಹೊನ್ನಾಳಿ 22 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಮೂವರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 10,319ಕ್ಕೆ ಏರಿಕೆಯಾಗಿದೆ.

ಇಂದು 139 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಈವರೆಗೆ 7,623 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2,500 ಸಕ್ರಿಯ ಪ್ರಕರಣಗಳಿದ್ದು, ಏಳು ಮಂದಿ ಐಸಿಯು ನಿಗಾದಲ್ಲಿದ್ದಾರೆ.

ABOUT THE AUTHOR

...view details