ದಾವಣಗೆರೆ:ಜಿಲ್ಲೆಯಲ್ಲಿಂದು 16 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 325ಕ್ಕೆ ಏರಿಕೆಯಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿಂದು 16 ಜನರಿಗೆ ಕೊರೊನಾ ಪಾಸಿಟಿವ್ - davanagere latest news
ದಾವಣಗೆರೆ ಜಿಲ್ಲೆಯಲ್ಲಿಂದು 16 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಒಂದು ವರ್ಷದ ಮಗು ಸೇರಿ ಐಎಲ್ಐನಿಂದ ಬಳಲುತ್ತಿದ್ದ ನಾಲ್ವರು, ಮೂವರು ಕೊರೊನಾ ವಾರಿಯರ್ಸ್, ರ್ಯಾಂಡಮ್ ಟೆಸ್ಟ್ ವೇಳೆ ನಾಲ್ವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 16 ಸೋಂಕಿತರ ಪೈಕಿ ದಾವಣಗೆರೆಯಲ್ಲಿ 8, ಹೊನ್ನಾಳಿ ತಾಲೂಕಿನಲ್ಲಿ 2, ಹರಿಹರದಲ್ಲಿ 2, ನ್ಯಾಮತಿ 2, ಜಗಳೂರಿನಲ್ಲಿ 1, ನೇರ್ಲಗಿ ಗ್ರಾಮದಲ್ಲಿ 1 ಪ್ರಕರಣ ಪತ್ತೆಯಾಗಿವೆ.
ಅಲ್ಲದೆ, ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಚನ್ನಗಿರಿಯ ಮೂವರು ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 325 ಪ್ರಕರಣಗಳ ಪೈಕಿ, 269 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 8 ಸಾವು ಸಂಭವಿಸಿದ್ದು, ಪ್ರಸ್ತುತ 48 ಸಕ್ರಿಯ ಪ್ರಕರಣಗಳಿವೆ.