ಕರ್ನಾಟಕ

karnataka

ETV Bharat / state

ಕರ್ಫ್ಯೂ ಇದ್ದರೂ ಬಾಗಿಲು ತೆರೆದ ಮಣಪುರಂ ಗೋಲ್ಡ್, ಬಿಸಿ ಮುಟ್ಟಿಸಿದ ದಾವಣಗೆರೆ ಪೊಲೀಸರು - ಮಣಪುರಂ ಗೋಲ್ಡ್,

ಈಗಾಗಲೇ ದಾವಣಗೆರೆ ನಗರದಲ್ಲಿ ಕಟ್ಟುನಿಟ್ಟಿನ ಟಫ್ ರೂಲ್ಸ್ ಜಾರಿ ಮಾಡಲಾಗಿದ್ದು, ಮನೆಯಿಂದ ಜನ ಹೊರ ಬರಲು ಒಮ್ಮೆ ಯೋಚಿಸಿ ಹೊರಬರುವ ಪರಿಸ್ಥಿತಿ ಉದ್ಭವವಾಗಿದೆ..

Bandh
Bandh

By

Published : Apr 24, 2021, 4:53 PM IST

ದಾವಣಗೆರೆ: ಜಿಲ್ಲೆಯಲ್ಲಿಂದು ವೀಕ್ ಎಂಡ್ ಕರ್ಫ್ಯೂವನ್ನು ವಿಧಿಸಲಾಗಿದೆ. ಅಂಗಡಿ-ಮುಗ್ಗಟ್ಟು ಬಂದ್ ಮಾಡಬೇಕು ಹಾಗೂ ವ್ಯಾಪಾರ- ವಹಿವಾಟು ಮಾಡ ಕೂಡದು ಎಂಬ ನಿಯಮಗಳನ್ನು ಸರ್ಕಾರ ಜಾರಿ ಮಾಡಿದೆ‌.

ಆದರೆ, ದಾವಣಗೆರೆ ನಗರದ ಚಾಮರಾಜಪೇಟೆಯಲ್ಲಿರುವ ಮಣಪುರಂ ಖಾಸಗಿ ಫೈನಾನ್ಸ್ ಕಂಪನಿಯನ್ನು ತೆರೆದು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರು.

ಇದನ್ನು ಗಮನಿಸಿದ ಬಸವನಗರ ಠಾಣೆ ಪೊಲೀಸರು ಮಣಪುರಂ ಫೈನಾನ್ಸ್ ಕಂಪನಿ ಕಚೇರಿಗೆ ನುಗ್ಗಿ ಬಂದ್ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿ ಬಿಸಿ ಮುಟ್ಟಿಸಿದರು.

ಇನ್ನು, ಇಂದು ವೀಕ್ ಎಂಡ್ ಕರ್ಫ್ಯೂ ಇದ್ದರು ಕೂಡ ಅನವಶ್ಯಕವಾಗಿ ಮನೆಯಿಂದ ಹೊರ ಬಂದಿದ್ದವರಿಗೆ ಪೊಲೀಸರು ದಂಡ ವಿಧಿಸಿದರು.

ಈಗಾಗಲೇ ದಾವಣಗೆರೆ ನಗರದಲ್ಲಿ ಕಟ್ಟುನಿಟ್ಟಿನ ಟಫ್ ರೂಲ್ಸ್ ಜಾರಿ ಮಾಡಲಾಗಿದ್ದು, ಮನೆಯಿಂದ ಜನ ಹೊರ ಬರಲು ಒಮ್ಮೆ ಯೋಚಿಸಿ ಹೊರಬರುವ ಪರಿಸ್ಥಿತಿ ಉದ್ಭವವಾಗಿದೆ.

ABOUT THE AUTHOR

...view details