ದಾವಣಗೆರೆ:ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಕ್ಕಳಿಗೆ ಕೊರೊನಾ ಕಂಟಕವಾಗಿದೆ. ಎರಡೇ ದಿನಕ್ಕೆ 71 ದಾವಣಗೆರೆಯ ವಿವಿಧ ಶಾಲಾ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿದರು ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 55 ಮಕ್ಕಳಿಗೆ ಕೊರೊನಾ ಪಾಸಿಟಿವ್ ಆಗಿದೆ. ದಾವಣಗೆರೆ ನಗರದ ನಿಟ್ಟುವಳ್ಳಿಯ ಮಾರುತಿ ಶಾಲೆಯಲ್ಲಿ 5 , ಅವರಗೊಳ್ಳ ಹಾಗೂ ವಡ್ಡಿನಹಳ್ಳಿ ಶಾಲೆಗಳಲ್ಲಿ ತಲಾ 2 ಕೇಸ್, ಜಗಳೂರು ಎನ್ಎಂಕೆ ಶಾಲೆಯಲ್ಲಿ 6, ಗವಿಸಿದ್ದೇಶ್ವರ ಶಾಲೆಯಲ್ಲಿ ಮೂವರು ಮಕ್ಕಳಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಶಾಲೆ ಬಂದ್ ಮಾಡುವುದಿಲ್ಲ ಎಂತಲೂ ಅವರು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕೋವಿಡ್ ಶಾಲಾ ಮಕ್ಕಳಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲಾಧಿಕಾರಿಗಳ ನಿರ್ಣಯಕ್ಕೆ ಬಿಟ್ಟಿದೆ ಎಂದು ತಿಳಿಸಿದೆ. ಆದರೆ, ಸೋಂಕು ಕಾಣಿಸಿಕೊಂಡ ಶಾಲೆಯನ್ನು ಮಾತ್ರ 7 ದಿನ ಬಂದ್ ಮಾಡುತ್ತೇವೆ. ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಯಾವುದೇ ಶಾಲೆಗಳನ್ನು ಬಂದ್ ಮಾಡುವುದಿಲ್ಲ. ಆರೋಗ್ಯ ಇಲಾಖೆ ಕೂಡ ರ‍್ಯಾಂಡಮ್ ಆಗಿ ಟೆಸ್ಟ್ ಮಾಡಲಾಗುತ್ತದೆ.
ಏಕಾದಶಿ ಇರುವ ಹಿನ್ನೆಲೆಯಲ್ಲಿ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮನೆಯಲ್ಲಿಯೇ ದೇವರ ಪ್ರಾರ್ಥನೆ ಮಾಡುವಂತೆ ಜಿಲ್ಲಾಧಿಕಾರಿಗಳ ಮನವಿ ಮಾಡಿದ್ದಾರೆ.
ಓದಿ:ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ: ಪಾದಯಾತ್ರೆ ನಿಲ್ಲಿಸುತ್ತಾ ಕಾಂಗ್ರೆಸ್?