ದಾವಣಗೆರೆ:ಜಿಲ್ಲೆಯಲ್ಲಿ ಮತ್ತೆ ಆರು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಕೋವಿಡ್ ಸೋಂಕಿತರ ಸಂಖ್ಯೆ 186ಕ್ಕೇರಿದೆ.
ದಾವಣಗೆರೆಯಲ್ಲಿ ಮತ್ತೆ 6 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 186ಕ್ಕೆ ಏರಿಕೆ - ದಾವಣಗೆರೆ ಜಿಲ್ಲಾಸ್ಪತ್ರೆ
ದಾವಣಗೆರೆಯಲ್ಲಿ ಮತ್ತೆ 6 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 186ಕ್ಕೆ ಏರಿದೆ.
ಇಬ್ಬರು ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಇದುವರೆಗೆ 149 ಸೋಂಕಿತರು ಗುಣಮುಖರಾಗಿದ್ದಾರೆ. ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರಿಗೆ ಸೋಂಕು ವಕ್ಕರಿಸಿದೆ. 4836 ಸಂಖ್ಯೆಯ ರೋಗಿ 33 ವರ್ಷದ ಪುರುಷ ಕಂಟೈನ್‍ಮೆಂಟ್ ಝೋನ್‍ನ ಸಂಪರ್ಕಿತನಾಗಿದ್ದಾನೆ. 4837 ಸಂಖ್ಯೆಯ ರೋಗಿ 64 ವರ್ಷದ ವೃದ್ಧ ರೋಗಿ ಸಂಖ್ಯೆ 3862ರ ಸಂಪರ್ಕಿತ. 4838 ಸಂಖ್ಯೆಯ ರೋಗಿ 36 ವರ್ಷದ ಮಹಿಳಾ ರೋಗಿ ಸಂಖ್ಯೆ 2417ರ ಸಂಪರ್ಕಿತೆ. 4839 ಸಂಖ್ಯೆಯ ರೋಗಿ 60 ವರ್ಷದ ಮಹಿಳಾ ರೋಗಿ 2417ರ ಸಂಪರ್ಕಿತೆ.
ರೋಗಿ ಸಂಖ್ಯೆ 4840ರ 35 ವರ್ಷದ ಮಹಿಳೆ ಹಾಗೂ 4841 ಸಂಖ್ಯೆಯ ರೋಗಿ 42 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 1485ರ ಸಂಪರ್ಕಿತರಾಗಿದ್ದಾರೆ. ಇಂದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ರೋಗಿ ಸಂಖ್ಯೆ 2415 ಮತ್ತು ರೋಗಿ ಸಂಖ್ಯೆ 2208 ಇವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 31 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 6 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.