ಕರ್ನಾಟಕ

karnataka

ದಾವಣಗೆರೆಯಲ್ಲಿ ಮತ್ತೆ 17 ಮಂದಿಗೆ ಕೊರೊನಾ: ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ

By

Published : Jun 7, 2020, 9:23 PM IST

ದಾವಣಗೆರೆ ಜಿಲ್ಲೆಯಲ್ಲಿ ಇಂದು ಮತ್ತೆ 17 ಮಂದಿಗೆ ಕೊರೊನಾ ದೃಢವಾಗಿದ್ದು,ಸೋಂಕಿತರ ಸಂಖ್ಯೆ 203 ಕ್ಕೆ ಏರಿಕೆಯಾಗಿದೆ.

cscscd
ದಾವಣಗೆರೆಯಲ್ಲಿ ಮತ್ತೆ 17 ಮಂದಿಗೆ ಕೊರೊನಾ

ದಾವಣಗೆರೆ: ಬೆಣ್ಣೆನಗರಿಯಲ್ಲಿ ಇಂದು ಒಂದೇ ದಿನ 17 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದ್ದು, ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ.

ಬಾಲಕ ಸೇರಿದಂತೆ ನಾಲ್ವರು ಪುರುಷರು, 13 ಮಹಿಳೆಯರಿಗೆ ಹೆಮ್ಮಾರಿ ವಕ್ಕರಿಸಿದೆ. P 4093 ಸೋಂಕಿತರಿಂದ ಐದು ಮಂದಿಗೆ, P 1247 ಸೋಂಕಿತರಿಂದ ಮೂವರು, P 3637 ಹಾಗೂ 4839 ಸೋಂಕಿತರಿಂದ ತಲಾ ಒಬ್ಬರಿಗೆ, ಕಂಟೈನ್​ಮೆಂಟ್ ಝೋನ್​ನ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಐವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 203 ಮಂದಿ ಸೋಂಕಿತರಿದ್ದು, 150 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಆರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ಹದಿನೈದು ದಿನಗಳಿಂದ ಸ್ವಲ್ಪ ನೆಮ್ಮದಿ ಇದ್ದ ಜಿಲ್ಲೆಯಲ್ಲಿ ಒಂದೇ ದಿನ ಹದಿನೇಳು ಮಂದಿಗೆ ಸೋಂಕು ವಕ್ಕರಿಸಿದ್ದು ಆತಂಕ ತಂದಿದೆ.

ABOUT THE AUTHOR

...view details