ದಾವಣಗೆರೆ: ನಗರದಲ್ಲಿ ಜನರ ನಿದ್ದೆಕೆಡಿಸಿದ್ದ ಹೆಮ್ಮಾರಿ ಕೊರೊನಾ ಈಗ ತಾಲೂಕು ಮಟ್ಟದಲ್ಲೂ ಆತಂಕ ಸೃಷ್ಟಿಸಿದೆ. ಚನ್ನಗಿರಿ ಪಟ್ಟಣದ ಗೌಡರ ಬೀದಿಯ ನಿವಾಸಿಗೆ ಸೋಂಕು ತಗುಲಿದ್ದು, ಈತನ ಕುಟುಂಬದವರಿಗೂ ವಕ್ಕರಿಸಿದೆ.
ತಮಿಳುನಾಡಿನ ಶಿವಕಾಶಿಗೆ ಸೋಂಕಿತ ವ್ಯಕ್ತಿ ಪಟಾಕಿ ತರಲು ಹೋಗಿದ್ದ. ಅಲ್ಲಿಂದಲೇ ಈ ವೈರಸ್ನ್ನು ಹೊತ್ತು ತಂದಿರಬಹುದು ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ. ಜಿಲ್ಲಾಡಳಿತವು ಸೋಂಕಿತ ಶಿವಕಾಶಿಗೆ ಹೋಗಿ ಬಂದಿದ್ದು ನಿಜ. ಆದ್ರೆ ಸೋಂಕು ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದೆ.