ದಾವಣಗೆರೆ: ಕೊರೊನಾ ಉಲ್ಭಣ ಆಗುತ್ತಿರುವ ಹಿನ್ನೆಲೆ ಸ್ವಾಮೀಜಿಯೊಬ್ಬರು ಕೊರೊನಾ ಹಾಗೂ ಮಾಸ್ಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು.
ಕೊರೊನಾ ಉಲ್ಭಣ, ರಸ್ತೆಯಲ್ಲಿ ಹೆಜ್ಜೆ ಹಾಕಿ ಸ್ವಾಮೀಜಿ ಕೊರೊನಾ ಜಾಗೃತಿ - ಸ್ವಾಮೀಜಿ ಕೊರೊನಾ ಜಾಗೃತಿ
ಲಾಕ್ಡೌನ್ ಇರುವ ಕಾರಣ ಮನೆಯಲ್ಲಿ ಇರಿ, ಕೊರೊನಾವನ್ನು ನಿಯಂತ್ರಣ ಮಾಡಲು ಸಹಕರಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಸಂತೆಬೆನ್ನೂರು ಪೊಲೀಸರು ಸೇರಿದಂತೆ ಖಡ್ಗ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು..
ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಚನ್ನಗಿರಿ ಶ್ರೀ ಕೇದಾರ ಲಿಂಗೇಶ್ವರ ಸ್ವಾಮಿ ನೇತೃತ್ವದಲ್ಲಿ ಹಾಗೂ ಖಡ್ಗ ಸಂಘಟನೆಯ ವತಿಯಿಂದ ಜಾಗೃತಿ ಅಭಿಯಾನ ಮಾಡಿದ್ದು, ಮಾಸ್ಕ್ ಹಾಕಿ ಸರ್ಕಾರದ ನಿರ್ದೇಶನ ಪಾಲನೆ ಮಾಡಿ ಎಂದು ಪಾದಯಾತ್ರೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಮನವಿ ಮಾಡಿದರು.
ಲಾಕ್ಡೌನ್ ಇರುವ ಕಾರಣ ಮನೆಯಲ್ಲಿ ಇರಿ, ಕೊರೊನಾವನ್ನು ನಿಯಂತ್ರಣ ಮಾಡಲು ಸಹಕರಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಸಂತೆಬೆನ್ನೂರು ಪೊಲೀಸರು ಸೇರಿದಂತೆ ಖಡ್ಗ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು. ಸ್ವಾಮೀಜಿಯವರ ಮನವಿಗೆ ಸ್ಪಂದಿಸಿದ ಸಂತೆಬೆನ್ನೂರು ಜನ್ರು ಮನೆಯಲ್ಲೇ ಇರುತ್ತೇವೆ ಎಂದು ತಿಳಿಸಿದರು.