ಕರ್ನಾಟಕ

karnataka

ETV Bharat / state

ದಾವಣಗೆರೆಯ ಮಾರುಕಟ್ಟೆಯಲ್ಲಿ ಕೊರೊನಾ ವೇಷ ಧರಿಸಿ ಯುವಕರಿಂದ ಜಾಗೃತಿ - ದಾವಣಗೆರೆ ಕೊರೊನಾ ಜಾಗೃತಿ

ಕೊರೊನಾ ಮಹಾಮಾರಿ ಪ್ರಪಂಚವ್ಯಾಪಿ ಜನರನ್ನು ತಲ್ಲಣಗೊಳಿಸಿದೆ. ಈ ನಡುವೆ ದಾವಣಗೆರೆಯ ಯುವಕರ ತಂಡವೊಂದು ಕೊರೊನಾ ವೈರಸ್‌ ಸಾಂಕೇತಕ ವೇಷಭೂಷಣ ಧರಿಸಿ ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಿಗೆ ತೆರಳಿ ಮಾಸ್ಕ್​ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.

Corona awareness
ಕೊರೊನಾ ವೇಷ

By

Published : Jun 10, 2021, 9:25 AM IST

ದಾವಣಗೆರೆ: ಕೋವಿಡ್‌-19 ಸೋಂಕಿನಿಂದ ಈಗಾಗಲೇ ಬೆಣ್ಣೆನಗರಿ ಜನರು ಹೈರಾಣಾಗಿದ್ದಾರೆ. ಮಹಾಮಾರಿ ಬಗ್ಗೆ ಜಿಲ್ಲಾಡಳಿತ ಜನಜಾಗೃತಿ ಮೂಡಿಸುತ್ತಿದೆ. ಇದ್ರ ಜೊತೆಗೆ, ದಾವಣಗೆರೆಯ ಯುವಕರು ಕೊರೊನಾ ವೇಷ ಧರಿಸಿ ವಿನೂತನವಾಗಿ ಮಾರುಕಟ್ಟೆಯಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಕೊರೊನಾ ವೇಷ ಧರಿಸಿ ಜಾಗೃತಿ

ಭರತ್ ಕಾಲೋನಿಯ ಯುವಕ ರಾಕೇಶ್ ಹಾಗೂ ಆತನ ಸ್ನೇಹಿತರು ಕೆ.ಆರ್ ಮಾರುಕಟ್ಟೆ ಸೇರಿದಂತೆ ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಿಗೆ ತಿಳಿ ಹೇಳುತ್ತಿದ್ದಾರೆ. ಯಾರು ಮಾಸ್ಕ್ ಹಾಕೋದಿಲ್ವೋ ಅಂತವರಿಗೆ ಮಾಸ್ಕ್ ಹಾಕಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ.

ಯುವಕ ರಾಕೇಶ್, ಅನುಪಯುಕ್ತ ಥರ್ಮಕೋಲ್​ ಅನ್ನು ಬಳಸಿ ಕೊರೊನಾ ವೇಷಭೂಷಣಗಳನ್ನು ತಯಾರಿಸಿದ್ದಾನೆ.

ಇದನ್ನೂ ಓದಿ:ಪರೀಕ್ಷೆ ಕುರಿತು ಮಕ್ಕಳು-ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸಿ: ಸಚಿವ ಸುರೇಶ್ ಕುಮಾರ್

ABOUT THE AUTHOR

...view details