ಕರ್ನಾಟಕ

karnataka

ETV Bharat / state

ಅಂದು ಕೈಮುಗಿದ್ರು ಜನ ಕೇಳಲಿಲ್ಲ, ಇಂದು ವಾಹನಗಳನ್ನೇ ಸೀಜ್ ಮಾಡಿದ ಪೊಲೀಸರು...!

ಕೆಲ ದಿನಗಳ ಹಿಂದೆಯಷ್ಟೇ ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಕೈಮುಗಿದು ರಸ್ತೆಗೆ ಇಳಿಯಬೇಡಿ ಎಂದು ಬೈಕ್ ಸವಾರರು ಹಾಗೂ ಕಾರು ಚಾಲಕರಿಗೆ ಮನವಿ ಮಾಡಿದ್ದ ಪೊಲೀಸರು, ಇಂದು ತುರ್ತು ಸೇವೆ, ಪಾಸ್ ಹೊರತುಪಡಿಸಿ ಹೊರಗೆ ಬಂದವರಿಗೆ ವಾಹನಗಳ ಜಪ್ತಿ ಮಾಡಿ ಪಾಠ ಕಲಿಸಿದರು.

ಪೊಲೀಸರು
ಪೊಲೀಸರು

By

Published : Mar 31, 2020, 6:01 PM IST

ದಾವಣಗೆರೆ:ನಗರದಲ್ಲಿ ಅನಾವಶ್ಯಕವಾಗಿ ರಸ್ತೆಗಿಳಿಯಬೇಡಿ ಎಂದು ಕೈಮುಗಿದು ಮನವಿ ಮಾಡಿದ್ದ ಪೊಲೀಸರು, ಈಗ ಸೀಜ್​​ ಮಾಡುವ ಕ್ರಮಕ್ಕೆ ಮುಂದಾಗಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳನ್ನು ಜಫ್ತಿ ಮಾಡಿದ್ದಾರೆ.

ನಗರದ ಅಂಬೇಡ್ಕರ್ ವೃತ್ತದಲ್ಲಿ ಎಎಸ್​ಪಿ ಎಂ. ರಾಜೀವ್ ನೇತೃತ್ವದಲ್ಲಿ ಪೊಲೀಸರು ವಿನಾಕಾರಣ ರೋಡಿಗಿಳಿದಿದ್ದವರಿಗೆ ಚಳಿ ಬಿಡಿಸಿದರು.‌ ಕೊರೊನಾ ವೈರಸ್ ಸೋಂಕು ತಡೆಗೆ ಲಾಕ್ ಡೌನ್‌ ಮಾಡಲಾಗಿದೆ. ಇದನ್ನು ಜನರು ಪಾಲಿಸಬೇಕು.‌ ಮನೆ ಒಳಗಡೆ ಇರುವಂತೆ ಮನವಿ ಮಾಡಿದರೂ ಕೆಲವರು ಹೊರಗೆ ಬರುತ್ತಿದ್ದಾರೆ. ಹಾಗಾಗಿ ಕಠಿಣ ಕ್ರಮ ಅನಿವಾರ್ಯ ಅನ್ನೋದು ಪೊಲೀಸರ ವಾದ.

ವಾಹನಗಳನ್ನೇ ಸೀಜ್ ಮಾಡಿದ ಪೊಲೀಸರು

ಬಡಾವಣೆ ಠಾಣೆಯ ಪಿಎಸ್ಐ ವೀರಭದ್ರಪ್ಪ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜಯದೇವ ವೃತ್ತದಲ್ಲಿ ಕೈಮುಗಿದು ರಸ್ತೆಗೆ ಇಳಿಯಬೇಡಿ ಎಂದು ಬೈಕ್ ಸವಾರರು ಹಾಗೂ ಕಾರು ಚಾಲಕರಿಗೆ ಮನವಿ ಮಾಡಿದ್ದರು. ಆದ್ರೆ ಇಂದು ತುರ್ತು ಸೇವೆ, ಪಾಸ್ ಹೊರತುಪಡಿಸಿ ಬಂದವರಿಗೆ ಪಾಠ ಕಲಿಸಿದರು.

ಈ ವೇಳೆ "ಈಟಿವಿ ಭಾರತ' ಜೊತೆ ಮಾತನಾಡಿದ ಎಎಸ್​ಪಿ ಎಂ. ರಾಜೀವ್ ಈಗಾಗಲೇ 60ರಿಂದ 70 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದ್ರೂ‌ ಕೆಲವರು ಅನಾವಶ್ಯಕವಾಗಿ ಮನೆಯಿಂದ ಹೊರಬರುತ್ತಿದ್ದು, ಇದಕ್ಕೆ‌ ಕಡಿವಾಣ ಹಾಕುತ್ತೇವೆ. ಇದು ಮುಂದುವರಿದರೆ ಮತ್ತಷ್ಟು ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details