ಕರ್ನಾಟಕ

karnataka

ETV Bharat / state

ಒಂದು ವರ್ಷ ಸಂಬಳ ಸಿಗದ ನೋವು: ಡೆತ್​ನೋಟ್​ ಬರೆದಿಟ್ಟು ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ - Cooperative Society secretary died by suicide in davanagere

ಒಂದು ವರ್ಷದ ಸಂಬಳ ಮಂಜೂರಿಗೆ 1 ಲಕ್ಷ ರೂಪಾಯಿಗೆ ಕ್ಲರ್ಕ್ ಜಗದೀಶ್ ಬೇಡಿಕೆ ಇಟ್ಟಿದ್ದರಿಂದ ಮೃತ ಚಂದ್ರಪ್ಪ 20 ಸಾವಿರ ಹಣವನ್ನು ಮುಂಗಡವಾಗಿ ನೀಡಿದ್ದರಂತೆ. ಅಲ್ಲದೆ, ಸೊಸೈಟಿಯಲ್ಲಿ ಹಣ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಕೂಡಾ ಮೃತ ಚಂದ್ರಪ್ಪನ ಮೇಲಿತ್ತು. ಇದು ಸುಳ್ಳು ಆರೋಪವಾಗಿದ್ದು, ನಾನು ಯಾವುದೇ ಹಣ ದುರ್ಬಳಕೆ ಮಾಡಿಲ್ಲ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Chandrappa
ಚಂದ್ರಪ್ಪ

By

Published : Jun 13, 2021, 6:10 PM IST

ದಾವಣಗೆರೆ: ಒಂದು ವರ್ಷದಿಂದ ಸಂಬಳ ನೀಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಶ್ಯಾಗಲೆ ಗ್ರಾಮದಲ್ಲಿ ನಡೆದಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಪ್ಪ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದು, ಒಂದು ವರ್ಷದಿಂದ ಸಂಬಳ ಇಲ್ಲದೆ ರೋಸಿಹೋಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಡೆತ್​ನೋಟ್​

ಒಂದು ವರ್ಷದ ಸಂಬಳ ಮಂಜೂರಿಗೆ 1 ಲಕ್ಷ ಹಣಕ್ಕೆ ಕ್ಲರ್ಕ್ ಜಗದೀಶ್ ಬೇಡಿಕೆ ಇಟ್ಟಿದ್ದರಿಂದ ಮೃತ ಚಂದ್ರಪ್ಪ 20 ಸಾವಿರ ಹಣವನ್ನು ಮುಂಗಡವಾಗಿ ನೀಡಿದ್ದರಂತೆ. ಅಲ್ಲದೆ, ಸೊಸೈಟಿಯಲ್ಲಿ ಹಣ ದುರ್ಬಳಕೆ ಮಾಡಿದ್ದ ಎಂಬ ಆರೋಪ ಕೂಡಾ ಮೃತ ಚಂದ್ರಪ್ಪನ ಮೇಲಿತ್ತು. ಇದು ಸುಳ್ಳು ಆರೋಪವಾಗಿದ್ದು, ನಾನು ಯಾವುದೇ ಹಣ ದುರ್ಬಳಕೆ ಮಾಡಿಲ್ಲ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಹದಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಾರ್ಮಾಡಿ ಘಾಟ್‌ನಲ್ಲಿ ಕೋತಿಗಳಿಗೆ ಹಣ್ಣು ನೀಡಿದ ನಳಿನ್ ಕುಮಾರ್ ಕಟೀಲ್

ABOUT THE AUTHOR

...view details