ಕರ್ನಾಟಕ

karnataka

ETV Bharat / state

​​​​​​​ಕಾಡಾನೆ ದಾಳಿ ತಡೆಗೆ ಕಂದಕ ನಿರ್ಮಾಣ: ಸಾರ್ವಜನಿಕರ ನಿಟ್ಟುಸಿರು - elephants-attack in davanagere district

ಚನ್ನಗಿರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಹೆಚ್ಚಾಗಿದ್ದ ಕಾಡಾನೆಗಳ ಉಪಟಳ ತಡೆಗೆ ಸರ್ಕಾರದ ಸೂಚನೆಯಂತೆ ಆನೆ ಕಂದಕಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸಾರ್ವಜನಿಕರು ಹಾಗೂ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಆನೆಗಳ ದಾಳಿ ವೀಕ್ಷಿಸಿದ ಶಾಸಕ ಮಾಡಳು ವಿರುಪಾಕ್ಷಪ್ಪ

By

Published : Oct 17, 2019, 9:56 AM IST

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಗೋಪನಾಳ್, ಹನುಮಂತ ನಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಎರಡು ಪುಂಡಾನೆಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿತ್ತು. ಇದನ್ನು ತಡೆಗಟ್ಟಲು ಮಾದೇನಹಳ್ಳಿಯಿಂದ ಹರೋನಹಳ್ಳಿ, ಹನುಮಂತನಗರದವರೆಗೆ ಸುಮಾರು 19 ಕಿ.ಮೀವರೆಗೆ ಆನೆ ಕಂದಕಗಳ ನಿರ್ಮಿಸುವಂತೆ ಅರಣ್ಯ ಇಲಾಖೆಯಿಂದ ಸಲ್ಲಿಸಿದ್ದ ಪ್ರಸ್ತಾವನೆಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ.

ಆನೆಗಳ ದಾಳಿ ವೀಕ್ಷಿಸಿದ ಶಾಸಕ ಮಾಡಾಳು ವಿರುಪಾಕ್ಷಪ್ಪ

ಆನೆ ದಾಳಿ ನಡೆಸಿದ ಸ್ಥಳಕ್ಕೆ ಶಾಸಕ ಮಾಡಾಳು ವಿರುಪಾಕ್ಷಪ್ಪ ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ದಾಳಿಯಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಕಾಡಿನಿಂದ ನಾಡಿಗೆ ಬಂದ ಆನೆಗಳಿಗೆ ಕಂದಕ ನಿರ್ಮಾಣ ಮಾಡಿರುವುದು ರೈತರು ಹಾಗೂ ಸಾರ್ವಜನಕರ ಆತಂಕವನ್ನು ಇದೀಗ ಕೊಂಚ ದೂರ ಮಾಡಿದೆ.

ABOUT THE AUTHOR

...view details