ಕರ್ನಾಟಕ

karnataka

ETV Bharat / state

ಡಿಟಿಎಚ್ ರಿಚಾರ್ಚ್ ಮಾಡಲು ಲಿಂಕ್‌ ಒತ್ತಿ ಹಣ ಕಳೆದುಕೊಂಡ ಕಾನ್​ಸ್ಟೆಬಲ್​ - ಆನ್​ಲೈನ್ ವಂಚನೆ

ಡಿಟಿಎಚ್​ ರಿಚಾರ್ಜ್​ ಮಾಡಲು ಅಪರಿಚಿತ ವ್ಯಕ್ತಿ ಕಳುಹಿಸಿದ ವೆಬ್ ಲಿಂಕ್​ ಒತ್ತಿ ಪೊಲೀಸ್​ ಕಾನ್​ಸ್ಟೆಬಲ್​ ಒಬ್ಬರು ತಮ್ಮ ಖಾತೆಯಲ್ಲಿದ್ದ 82,998 ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

Cyber Fraud
ಸೈಬರ್​ ವಂಚನೆ

By ETV Bharat Karnataka Team

Published : Jan 12, 2024, 2:28 PM IST

ದಾವಣಗೆರೆ: ಆನ್​ಲೈನ್​ನಲ್ಲಿ ಜನಸಾಮಾನ್ಯರಿಗೆ ವಂಚಿಸಿದ್ದ ಸೈಬರ್ ವಂಚಕರು ಪೊಲೀಸರಿಗೂ ವಂಚಿಸಿರುವ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸ್ ಕಾನ್‌ಸ್ಟೆಬಲ್​ ಒಬ್ಬರು ಸೈಬರ್​ ವಂಚನೆಯಿಂದ 82,998 ರೂಪಾಯಿ ಕಳೆದುಕೊಂಡಿದ್ದಾರೆ. ದಾವಣಗೆರೆ ನಗರದ ಪಿಜೆ ಬಡಾವಣೆಯ ಪೊಲೀಸ್ ಕಾನ್​ಸ್ಟೆಬಲ್ ಬಸವರಾಜ ಬಾಗೇವಾಡಿ ಆನ್​ಲೈನ್ ಮೋಸ ಹೋಗಿದ್ದಾರೆ.

ಪೊಲೀಸ್ ಕಾನ್​ಸ್ಟೆಬಲ್ ಬಸವರಾಜ್ ಡಿಟಿಎಚ್ ರಿಜಾರ್ಚ್ ಮಾಡಿಸುವ ಉದ್ದೇಶದಿಂದ ಒಳ್ಳೆಯ ಪ್ಲಾನ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಿದ್ದಾಗ ಟಾಟಪ್ಲೇ ಎಂಬ ಡಿಟಿಎಚ್‌ನ ಮೊಬೈಲ್ ಸಂಖ್ಯೆ ಸಿಕ್ಕಿದೆ. ಆ ಸಂಖ್ಯೆಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿಯೊಬ್ಬ ಉತ್ತಮ ಯೋಜನೆ ಇದೆ ಎಂದು ನಂಬಿಸಿ ಲಿಂಕ್‌ ಓಪನ್ ಮಾಡಿ, ಅದರಲ್ಲಿ ಮಾಹಿತಿ ತುಂಬುವಂತೆ ತಿಳಿಸಿದ್ದಾನೆ.

ಅಪರಿಚಿತ ವ್ಯಕ್ತಿಯ ಮಾತುಗಳಿಗೆ ಮರುಳಾದ ಬಸವರಾಜ್ ಹೇಳಿದಂತೆ ಮಾಹಿತಿ ತುಂಬಿದ್ದಾರೆ. ಈ ವೇಳೆ ಅವರ ಖಾತೆಯಿಂದ ಹಂತಹಂತವಾಗಿ ಒಟ್ಟು ಹಣ ಕಡಿತವಾಗಿದೆ. ತಕ್ಷಣ ಬಸವರಾಜ್ ಈ ಬಗ್ಗೆ ಸಿಇಎನ್‌ ಅಪರಾಧ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯರೇ ಟಾರ್ಗೆಟ್, ಪರ್ಸ್ ಎಗರಿಸುವ ಕಳ್ಳರು:ದಾವಣಗೆರೆಯ ವಿದ್ಯಾನಗರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರ ಕೈಯಲ್ಲಿದ್ದ ಪರ್ಸ್ ಖದೀಮನೋರ್ವ ಎಗರಿಸಿರುವ ಘಟನೆ ನಡೆದಿದೆ. ರಾಮನಗರದ ನಿವಾಸಿ ಅನಿತಾ ಫಾಲಾಕ್ಷಿ ಪರ್ಸ್ ಸಮೇತ ಹಣ ಕಳೆದುಕೊಂಡ ಮಹಿಳೆ. ಇನ್ನು ಕಳ್ಳತನವಾದ ಪರ್ಸ್​ನಲ್ಲಿ 2,000 ಹಾಗೂ ಮೊಬೈಲ್ ಇತ್ತು. ಅನಿತಾ ಅವರು ಸೊಪ್ಪು ಮಾರಾಟ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಕಳ್ಳನೊಬ್ಬ ಕೈಯಲ್ಲಿದ್ದ ಪರ್ಸ್ ಎಗರಿಸಿದ್ದಾನೆ.

ಇದನ್ನೂ ಓದಿ:ಖಾತೆ ಫ್ರೀಜ್​ ಮಾಡಿ ಸೈಬರ್​ ವಂಚಕರಿಂದ 3.70 ಕೋಟಿ ಹಣ ಹಿಂಪಡೆದ ಮುಂಬೈ ಪೊಲೀಸರು​

ABOUT THE AUTHOR

...view details