ಹರಿಹರ(ದಾವಣಗೆರೆ): ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಯ ವಸತಿ ಯೋಜನೆಗಳ ವೆಬ್ಸೈಟ್ ಲಾಕ್ ಆಗಿದ್ದು, ಕೂಡಲೇ ಅದನ್ನು ಓಪನ್ ಮಾಡುವಂತೆ ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಗ್ರಾ.ಪಂ ವಸತಿ ಯೋಜನೆಗಳ ವೆಬ್ಸೈಟ್ ಲಾಕ್: ಕಾಂಗ್ರೆಸ್ ಆಕ್ರೋಶ
ಬಡವರ ಪಾಲಿಗೆ ಆಸರೆಯಾಗಬೇಕಿದ್ದ ವಸತಿ ಮನೆಗಳು ಮಾರಕವಾಗಿ ಪರಿಣಮಿಸಿ, ಬಡವರು ಬೀದಿಗೆ ಬರುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ್ ಆರೋಪ ಮಾಡಿದರು.
ನಗರದ ರಚನಾ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ್ ಮಾತನಾಡಿ, ಬಡವರ ಪಾಲಿಗೆ ಆಸರೆಯಾಗಬೇಕಿದ್ದ ವಸತಿ ಮನೆಗಳು ಮಾರಕವಾಗಿ ಪರಿಣಮಿಸಿ, ಬಡವರು ಬೀದಿಗೆ ಬರುತ್ತಿದ್ದಾರೆ ಎಂದು ಆರೋಪ ಮಾಡಿದರು.
ಸರ್ಕಾರವು ಬಡವರ ಜೀವನದಲ್ಲಿ ಆಟವಾಡದೆ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಅತಿವೃಷ್ಠಿ ಕಾರಣವನ್ನು ಹೇಳಿಕೊಂಡು ಬಡವರಿಗೆ ಸೇರಬೇಕಾದ ಅನುದಾನ ಬೇರೆಡೆ ವರ್ಗಾವಣೆ ಮಾಡಬಾರದು. ಒಂದು ವೇಳೆ ಫಲಾನುಭವಿಗಳಿಗೆ ತಾರತಮ್ಯವಾದರೆ ಪ್ರತಿಯೊಂದು ಗ್ರಾ.ಪಂ.ಗಳಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.