ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಗೈರಾಗುವ ಮೂಲಕ ಪಕ್ಷಕ್ಕೆ ದ್ರೋಹ ಬಗೆದಿರುವ ಕಾರ್ಪೋರೇಟರ್ ಯಶೋಧ ಉಮೇಶ್ ಕೂಡಲೇ ರಾಜೀನಾಮೆ ನೀಡಬೇಕು ಎಂದು 20ನೇ ವಾರ್ಡ್ನ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಮೇಯರ್ ಚುನಾವಣೆಗೆ ಗೈರಾದ ಕೈ ಕಾರ್ಪೋರೇಟರ್ ರಾಜೀನಾಮೆಗೆ ಆಗ್ರಹ - ದಾವಣಗೆರೆ ಸುದ್ದಿ
ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಗೈರಾಗುವ ಮೂಲಕ ಪಕ್ಷಕ್ಕೆ ದ್ರೋಹ ಬಗೆದಿರುವ ಕಾರ್ಪೋರೇಟರ್ ಯಶೋಧ ಉಮೇಶ್ ಕೂಡಲೇ ರಾಜೀನಾಮೆ ನೀಡಬೇಕು ಎಂದು 20ನೇ ವಾರ್ಡ್ನ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಕಾಂಗ್ರೆಸ್ನ 20ನೇ ವಾರ್ಡ್ ಅಧ್ಯಕ್ಷ ಶಂಕರ್, ನಮ್ಮ ವಾರ್ಡ್ಗೆ ಯಶೋಧ ಉಮೇಶ್ ಅಗತ್ಯವಿಲ್ಲ. ಇಲ್ಲಿಂದ ತೊಲಗಬೇಕು. ಬಿಜೆಪಿ ಒಡ್ಡಿದ ಹಣ, ಇತರೆ ಆಮಿಷಕ್ಕೆ ಬಲಿಯಾಗುವ ಮೂಲಕ ಕಾಂಗ್ರೆಸ್ಗೆ ಮತ ಹಾಕಿದ ಮತದಾರರಿಗೆ ವಿಷ ಕುಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಮುನ್ನಾ ದಿನ ರಾತ್ರಿ 12 ಗಂಟೆಯವರೆಗೆ ಕಾಂಗ್ರೆಸ್ ಪರವಾಗಿಯೇ ಇದ್ದ ಯಶೋಧ ಉಮೇಶ್ ಬೆಳಗಾಗುತ್ತಿದ್ದಂತೆ ಬಿಜೆಪಿ ಪರ ವಾಲಿದ್ದಾರೆ. ಇಂಥವರು ನಮಗೆ ಅಗತ್ಯವಿಲ್ಲ. ಅತಿ ಹೆಚ್ಚು ಮತಗಳ ಅಂತರದಿಂದ ನಾವು ಗೆಲ್ಲಿಸಿದ್ದರೂ ಮೋಸ ಮಾಡಿದರು. ಹೀಗಾಗಿ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲೇಬೇಕು. ಉಪ ಚುನಾವಣೆಯಲ್ಲಿ ನಾವು ನಮ್ಮ ವಾರ್ಡ್ನಲ್ಲಿ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದಿದ್ದಾರೆ.