ಕರ್ನಾಟಕ

karnataka

ETV Bharat / state

ಸರ್ಕಾರಿ ಕಾಲೇಜಿಗೆ ಹೆಸರಿಡಲು ಎರಡು ಗ್ರಾಮಸ್ಥರ ನಡುವೆ ಹಗ್ಗಜಗ್ಗಾಟ..ವಿದ್ಯಾರ್ಥಿಗಳು ಹೈರಾಣು! - ದಾವಣಗೆರೆ ಪಾಲಿಟೆಕ್ನಿಕ್ ಕಾಲೇಜಿಗೆ ಹೆಸರಿಡುವ ಕುರಿತು ಗ್ರಾಮಸ್ಥರ ನಡುವೆ ಜಗಳ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ಒಂದು ಪಾಲಿಟೆಕ್ನಿಕ್ ಕಾಲೇಜನ್ನು ನಿರ್ಮಾಣ ಮಾಡಲು ದಾಗಿನಕಟ್ಟೆ ಗ್ರಾಮದ ಗ್ರಾಮಸ್ಥರು ಟೊಂಕ ಕಟ್ಟಿ ನಿಂತಿದ್ದರು. ಅವರ ಹೋರಾಟದ ಫಲವಾಗಿ ಇದೀಗ ಗ್ರಾಮದಲ್ಲಿ ಕಾಲೇಜಿನ ಭವ್ಯ ಕಟ್ಟಡ ತಲೆ ಎತ್ತಿ ನಿಂತಿದೆ.

ಬಸವಪಟ್ಟಣ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು
ಬಸವಪಟ್ಟಣ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು

By

Published : Jun 7, 2022, 6:09 PM IST

ದಾವಣಗೆರೆ: ಆ ಗ್ರಾಮಸ್ಥರು ತಮ್ಮ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮಕ್ಕಳ ಉಪಯೋಗಕ್ಕೆಂದು ಐದು ಎಕರೆ ಜಮೀನು ನೀಡಿ ಭವ್ಯ ಕಾಲೇಜನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರದ ಬಾಗಿಲು ತಟ್ಟಿದ್ರು. ಆದರೆ, ಸರ್ಕಾರ ಮಾತ್ರ ಕ್ಯಾರೇ ಎನ್ನಲಿಲ್ಲ. ಇದರಿಂದ ಬೇಸತ್ತ ಆ ಗ್ರಾಮಸ್ಥರು ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುವ ವೇಳೆ ಪ್ರತಿಭಟನೆ ನಡೆಸಿ ತಮ್ಮ ಗ್ರಾಮಕ್ಕೆ ಪಾಲಿಟೆಕ್ನಿಕ್ ಕಾಲೇಜನ್ನು ದಕ್ಕಿಸಿಕೊಂಡು ಬಂದಿದ್ರು. ಕಾಲೇಜು ಏನೋ ನಿರ್ಮಾಣ ಆಗಿದೆ. ಇದೀಗ ಆರಂಭ ಆಗ್ಬೇಕು ಎನ್ನುವಷ್ಟರಲ್ಲಿ ಮತ್ತೊಂದು ಕಂಠಕ ಎದುರಾಗಿದೆ.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನಾಮಕರಣದ ಬಗ್ಗೆ ಗ್ರಾಮಸ್ಥರು ಮಾತನಾಡಿದರು

ಮಕ್ಕಳ ಕಲಿಕೆಗೆ ಆಸರೆಯಾಗಲೆಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ಒಂದು ಪಾಲಿಟೆಕ್ನಿಕ್ ಕಾಲೇಜನ್ನು ನಿರ್ಮಾಣ ಮಾಡಲು ದಾಗಿನಕಟ್ಟೆ ಗ್ರಾಮದ ಗ್ರಾಮಸ್ಥರು ಟೊಂಕ ಕಟ್ಟಿ ನಿಂತಿದ್ದರು. ಅವರ ಹೋರಾಟದ ಫಲವಾಗಿ ಇದೀಗ ಗ್ರಾಮದಲ್ಲಿ ಕಾಲೇಜಿನ ಭವ್ಯ ಕಟ್ಟಡ ತಲೆ ಎತ್ತಿ ನಿಂತಿದೆ.

ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದ ಹೆಸರು.. ಆದರೆ ಆ ಕಾಲೇಜು ಆರಂಭ ಆಗಬೇಕು ಎಂಬುವಷ್ಟರಲ್ಲಿ ಉನ್ನತ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಈ ಕಾಲೇಜಿಗೆ ಬಸವಪಟ್ಟಣದ ಪಾಳೇಗಾರ ಕೆಂಗಣ್ಣನಾಯಕನ ಹೆಸರನ್ನು ಕಾಲೇಜಿಗೆ ನಾಮಕರಣ ಮಾಡ್ಭೇಕೆಂದು ದಾಗಿನಕಟ್ಟೆ ಗ್ರಾಮದ ಗ್ರಾಮಸ್ಥರು ಈ ಮೊದಲೇ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು. ಆದ್ರೂ ತಲೆ ಕೆಡಸಿಕೊಳ್ಳದ ಶಿಕ್ಷಣ ಇಲಾಖೆಯ ಅಧಿಕಾರಿಗಳು ದಾಗಿನಕಟ್ಟೆ ಅಥವಾ ಕೆಂಗಣ್ಣನಾಯಕ ಹೆಸರನ್ನು ಕಾಲೇಜಿಗೆ ನಾಮಕರಣ ಮಾಡದೇ ಕೇವಲ ಬಸವಪಟ್ಟಣ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎಂದು ನಾಮಕರಣ ಮಾಡಿರುವುದು ದಾಗಿನಕಟ್ಟೆ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕಾಲೇಜಿನ ಆವರಣದಲ್ಲಿ ಉಗ್ರವಾಗಿ ಪ್ರತಿಭಟನೆ ಮಾಡುವ ಮೂಲಕ ಮತ್ತೊಮ್ಮೆ ಶಿಕ್ಷಣ ಇಲಾಖೆ ನಡೆಯನ್ನು ಖಂಡಿಸಿದ್ದಾರೆ. ಬಸವಪಟ್ಟಣದ ಪಾಳೇಗಾರ ಕೆಂಗಣ್ಣನಾಯಕನ ಹೆಸರನ್ನು ಕಾಲೇಜಿಗೆ ಮರುನಾಮಕರಣ ಮಾಡಬೇಕು. ಇಲ್ಲವಾದಲ್ಲಿ ಕಾಲೇಜು ಆರಂಭ ಮಾಡಲು ಅವಕಾಶ ಕಲ್ಪಿಸುವುದಿಲ್ಲ ಎಂದಿದ್ದಾರೆ.

ಕಾಲೇಜಿನ ಮುಂದೆ ಕೆಲ ಕಾಲ ಬಿಗುವಿನ ವಾತಾವರಣ.. ಈ ಕಾಲೇಜು ಮಂಜೂರು ಆದ ಬಳಿಕ ಬಸವಪಟ್ಟಣ ಗ್ರಾಮದ ಗ್ರಾಮಸ್ಥರು ಕಾಲೇಜು ನಿರ್ಮಾಣ ಮಾಡಲು ಸ್ಥಳ ನೀಡಲು ಹಿಂದೇಟು ಹಾಕಿದ್ದರಿಂದ ದಾಗಿನಕಟ್ಟೆ ಗ್ರಾಮದ ಗ್ರಾಮಸ್ಥರು ಐದು ಎಕರೆ ಭೂಮಿ ನೀಡಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ ಮಾಡಲು ಅನುವು ಮಾಡಿಕೊಟ್ಟರು. ನಾವು ಕಾಲೇಜು ನಿರ್ಮಾಣ ಮಾಡಲು ಭೂಮಿ ನೀಡಿದ್ದೇವೆ.

ಆದರೆ ಕಾಲೇಜಿಗೆ ಮಾತ್ರ ಹೆಸರಿಟ್ಟಿರುವುದು ಬಸವಪಟ್ಟಣದ್ದು ಎಂದು ತಕರಾರು ತೆಗೆದಿರುವ ಗ್ರಾಮಸ್ಥರು ಕೆಂಗಣ್ಣನಾಯಕರ ಹೆಸರಿನೊಂದಿಗೆ ದಾಗಿನಕಟ್ಟೆ ಗ್ರಾಮದ ಹೆಸರು ಕೂಡ ನಾಮಕರಣ ಮಾಡ್ಭೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ರು. ಇದರಿಂದ ಕಾಲೇಜಿನ ಮುಂದೆ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು.

ಓದಿ:ಕರಾವಳಿಯಲ್ಲಿ ಮರಳುಗಾರಿಕೆ ಬಂದ್​.. ಬೀದಿಗೆ ಬಂದ ಸಾವಿರಾರು ಕುಟುಂಬಗಳು !

For All Latest Updates

TAGGED:

ABOUT THE AUTHOR

...view details